More

    ಜ್ಯೋತಿ ಬೆಳಗಿಸಿ ನಮನ ಸಲ್ಲಿಸಿ

    ಲಿಂಗಸುಗೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠೆ ಪ್ರಯುಕ್ತ ಬಿಜೆಪಿ ನೇತೃತ್ವದಲ್ಲಿ ನಡೆದ ಸ್ವಚ್ಛ ತೀರ್ಥಕ್ಷೇತ್ರ ಅಭಿಯಾನಕ್ಕೆ ಶಾಸಕ ಮಾನಪ್ಪ ವಜ್ಜಲ್ ಸೋಮವಾರ ಚಾಲನೆ ನೀಡಿದರು.

    ಪಟ್ಟಣದ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸ್ವಚ್ಛತೆ ನಡೆಸಿ ಮಾತನಾಡಿದ ಶಾಸಕ, ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕಸ ಬಳಿದು ಎತ್ತಿ ಹಾಕಿ, ನೀರೆತ್ತಿ ತೊಳೆದು ಚೊಕ್ಕಟಗೊಳಿಸಲಾಗುತ್ತಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಅತ್ಯಂತ ಶ್ರದ್ಧಾ, ಭಕ್ತಿ, ಪವಿತ್ರವಾಗಿ ನೆರವೇರಿಸಲಾಗುತ್ತದೆ.

    ರಾಮ ಭಕ್ತರು ಅಂದು ತಮ್ಮ ಮನೆಯಲ್ಲಿ ಜ್ಯೋತಿ ಬೆಳಗುವ ಮೂಲಕ ನಮನ ಸಲ್ಲಿಸಬೇಕೆಂದು ಮನವಿ ಮಾಡಿದರು. ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಹುಲ್ಲೇಶ ಸಾಹುಕಾರ, ಜಗನ್ನಾಥ ಕುಲಕರ್ಣಿ, ಅಮರೇಶ ಗಂಭೀರಮಠ, ಭೀಮಸೇನರಾವ್ ಕುಲಕರ್ಣಿ, ಅನಂತದಾಸ, ಚನ್ನಪ್ಪಗೌಡ, ನಾಗಭೂಷಣ, ವೆಂಕನಗೌಡ ಐದನಾಳ, ಜಗದೀಶ ಹಿರೇಮಠ, ಗದ್ದೆಮ್ಮ ಯಮನೂರು, ಜಯಶ್ರೀ ಭೋವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts