More

    ಜೀವನದ ಪಾಠ ಹೇಳಲಿದೆ ಜನಪದ

    ಮಾನ್ವಿ: ಅಧುನಿಕ ಭರಾಟೆಯಲ್ಲಿ ಜನಪದ ಸಾಹಿತ್ಯ ನಶಿಸುತ್ತಿದ್ದು, ಜನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

    ನೀರಮಾನ್ವಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಜನಪದ ಜೀವನ ಕಲಿಸಲಿದ್ದು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ಮೂಲಕ ಜನಪದ ಕಲೆ ಪ್ರದರ್ಶಿಸಬೇಕೆಂದರು.

    ಡಿಡಿಪಿಐ ಕೆ.ಡಿ.ಬಡಿಗೇರ್ ಮಾತನಾಡಿ, ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಆಯೋಜಿಸಲಾಗುತ್ತಿದೆ. ಎಸ್ಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು 625 ಪೂರ್ಣಾಂಕ ಪಡೆಯುವಂತೆ ಬೋಧನೆ ಮಾಡಿದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವುದಕ್ಕೆ ಸಾಧ್ಯವಾಗಲಿದೆ ಎಂದರು. ವಿವಿಧ ಶಾಲೆಗಳ 14 ಕ್ಕೂ ಹೆಚ್ಚು ತಂಡಗಳು 23 ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದವು.

    ಭಾರತ ನಾಟ್ಯ ಪ್ರದರ್ಶಿಸಿದ ಲಿಂಗಸುಗೂರು ತಾಲೂಕಿನ ವಿದ್ಯಾರ್ಥಿ ವನಜಾಕ್ಷಿ ಕುಲಕರ್ಣಿಗೆ ಶಾಸಕ ಹಂಪಯ್ಯನಾಯಕ 5 ಸಾವಿರ ರೂ. ನೀಡಿ ಗೌರವಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಸುರೇಶ ಕುರ್ಡಿ, ಬಿಇಒ ಚಂದ್ರಶೇಖರ ದೊಡ್ಡಮನಿ, ಕಾಂಗ್ರೆಸ್ ಮುಖಂಡ ಶ್ರೀರಾಮುಲು, ಹಂಪಣ್ಣ ಚಂಡೂರು, ಯಲ್ಲಪ್ಪ ತಾಸಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts