More

    ಕನ್ನಡದಲ್ಲಿದೆ ಅದ್ಭುತ ಶಕ್ತಿ

    ಶಿವಮೊಗ್ಗ: ಕನ್ನಡ ಅಸ್ಮಿತೆ ನಮ್ಮ ಧೀಮಂತ ಶಕ್ತಿ ಆಗಬೇಕು. ಜೀವನ ಕನಸುಗಳ ಸಂತೆಯಾಗಿದ್ದು ಆ ಕನಸಿನಲ್ಲೂ ಕನ್ನಡ ತುಂಬಿದರೆ ಮತ್ತಷ್ಟು ಸೊಗಸಾಗಲಿದೆ ಎಂದು ಜಿಲ್ಲಾಮಟ್ಟದ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಿಜಯಾದೇವಿ ಹೇಳಿದರು.

    ಸಮ್ಮೇಳನದ ಎರಡನೇ ದಿನವಾದ ಸೋಮವಾರ ಸಮ್ಮೇಳನಾಧ್ಯಕ್ಷರ ಜತೆ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಅದ್ಭುತ ಶಕ್ತಿ ಅಡಕವಾಗಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕನ್ನಡ ಭಾಷಾ ಪ್ರೇಮ ಬೆಳೆಸಬೇಕಿದೆ. ಆಗ ಮಾತ್ರ ಭಾಷೆ ಮುಂದಿನ ಪೀಳಿಗೆಗೆ ಕನ್ನಡ ಉಳಿಯಲಿದೆ ಎಂದರು.

    ಎಲ್ಲಿ ಜ್ಞಾನ ಇರುತ್ತದೋ ಅಲ್ಲಿ ಅಜ್ಞಾನವನ್ನು ತೊಡೆಯುವ ಕೆಲಸ ಆಗಲಿದೆ. ನ್ಯಾಯಾಲಯದ ಸಮನ್ಸ್​ಗಳು ಕನ್ನಡದಲ್ಲೇ ಇರಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ ಕಡ್ಡಾಯವೆಂದು ಹೇಳುವ ಹಕ್ಕು ಸಾಹಿತಿ ಮತ್ತು ಬರಹಗಾರರಿಗಿಲ್ಲ ಎಂದರು.

    ಅಂಗಡಿ ಮುಂಗಟ್ಟುಗಳ ಫಲಕಗಳು ಕನ್ನಡದಲ್ಲೇ ಇರಲಿ ಎಂದು ಪದೇಪದೆ ಹೇಳಲಾಗುತ್ತಿದೆ. ಆದರೆ ಬಹುತೇಕ ಮಳಿಗೆಗಳ ಮುಂದೆ ಆಂಗ್ಲ ಭಾಷೆ ಫಲಕಗಳು ರಾರಾಜಿಸುತ್ತವೆ. ಈ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿದೆ. ಸ್ಥಳೀಯಾಡಳಿತಗಳೇ ಕನ್ನಡ ಬಳಕೆ ಬಗ್ಗೆ ಕಟ್ಟಪ್ಪಣೆ ಹೊರಡಿಸುವ ಕೆಲಸ ಎಲ್ಲೆಡೆ ಆಗಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಕನ್ನಡ ಭಾಷೆ ಮನ, ಮನೆ, ಮಳಿಗೆಗಳಿಂದಲೂ ದೂರ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

    ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರುದ್ರಮುನಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್.ಮಹಾರುದ್ರ ಆಶಯ ನುಡಿಗಳನ್ನಾಡಿದರು. ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ, ಮಮತಾ ಹೆಗ್ಡೆ, ಡಾ. ಎನ್.ಆರ್.ಮಂಜುಳಾ, ಶ್ರೀಲಕ್ಷ್ಮಿ ಶಾಸ್ತ್ರಿ, ರುಕ್ಷ್ಮಿಣಿ ಆನಂದ, ಶಾಲಿನಿ ರಾಮಸ್ವಾಮಿ, ವಿನೋದ ಆನಂದ, ಜಿ.ಎಸ್.ಸರೋಜಾ, ಶೀಲಾ ಸುರೇಶ್, ಕೆ.ವೈ.ರಾಮಚಂದಪ್ಪ ಸಂವಾದದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts