More

    ಭದ್ರತೆ ಒದಗಿಸುವಲ್ಲಿ ಎಲ್‌ಐಸಿ ಮುಂಚೂಣಿ

    ಚನ್ನರಾಯಪಟ್ಟಣ: ಪ್ರತಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಭಾರತೀಯ ಜೀವಾ ವಿಮಾ ನಿಗಮ ದೇಶದಲ್ಲೇ ಅಗ್ರಸ್ಥಾನದೊಂದಿಗೆ ಮುಂಚೂಣಿ ಸಾಧಿಸಿದೆ ಎಂದು ಎಲ್‌ಐಸಿ ಮೈಸೂರು ವಿಭಾಗೀಯ ಮಂಡಳಿಯ ಹಿರಿಯ ವಿಭಾಗಾಧಿಕಾರಿ ಜಿ.ಸತ್ಯನಾರಾಯಣ ಶಾಸ್ತ್ರಿ ತಿಳಿಸಿದರು.

    ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಮೈಸೂರು ವಿಭಾಗೀಯ ಮಂಡಳಿ ವತಿಯಿಂದ ಖಾಸಗಿ ಕಲ್ಯಾಣ ಮಂಟಪದಲ್ಲಿ ತಾಲೂಕು ಪ್ರತಿನಿಧಿಗಳಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಉತ್ತಮ ವಿಮಾ ಭದ್ರತೆ ಕೊಡುವಲ್ಲಿ ಎಲ್ಐಸಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಇದನ್ನು ಸದಾಕಾಲ ಉಳಿಸಿಕೊಂಡು ಹೋಗುವ ಬದ್ಧತೆ ಪ್ರತಿ ಎಲ್ಐಸಿ ಪ್ರತಿನಿಧಿ, ನೌಕರಿನಿಗಿರಬೇಕು ಎಂದರು.
    ವಿಭಾಗೀಯ ಹಂತದ ಮುಂದಿನ ಶಿಬಿರ ಹೈದ್ರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದ್ದು, ನವೆಂಬರ್ 24ರಂದು ನಡೆಯುವ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

    ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿಲೀಪ್ ಪಾಟೀಲ್ ಮಾತನಾಡಿ, ಒಕ್ಕೂಟಕ್ಕೆ 60 ವಸಂತ ತುಂಬಿದ್ದು, ಹೊಸ ಯೋಜನೆಗಳನ್ನು ಪ್ರತಿನಿಧಿಗಳಿಗೆ ಅರ್ಥೈಸಿದ ನಂತರ ಪಾಲಿಸಿದಾರರಿಗೆ ಅರ್ಥೈಸಿಸುವ ಕೆಲಸವನ್ನು ಒಕ್ಕೂಟ ನಿರಂತರವಾಗಿ ಮಾಡುತ್ತಿದೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಮೈಸೂರು ವಿಭಾಗೀಯ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ವಿ.ಜಿ.ಅಶೋಕ್ ಮಾತನಾಡಿದರು. ಮಾರುಕಟ್ಟೆ ವ್ಯವಸ್ಥಾಪಕ ಎಂ.ನಾಗೇಶ್ವರ್‌ರಾವ್, ಸಕಲೇಶಪುರ ಮತ್ತು ಬೇಲೂರು ಶಾಖೆ ವ್ಯವಸ್ಥಾಪಕ ಕೆ.ಶ್ರೀಕಾಂತ್, ಮುಖ್ಯ ತರಬೇತುದಾರ ಕೆ.ಬಾಲಕೃಷ್ಣ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ರಾಜು, ಖಜಾಂಚಿ ಬಿ.ಆರ್.ಮಹೇಶ್, ಸಹ ಕಾರ್ಯದರ್ಶಿ ಎಸ್.ಶಿವಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಕೆ.ಸವಿತಾ, ಕಾರ್ಯದರ್ಶಿ ಜಿ.ವಿ.ರಾಜಮ್ಮ, ಖಜಾಂಚಿ ಜೆ.ಸಿ.ಕಮಲಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts