More

    ಗ್ರಂಥಾಲಯ ಜ್ಞಾನ ವಿಕಾಸಕ್ಕೆ ದಾರಿದೀಪವಾಗಿದೆ. ಮಲ್ಲೇಶ ಡಿ ಎಚ್.

    ಅಡವಿಸೋಮಾಪೂರ: ನಮಗೆ ಅನ್ನ, ನೀರು, ಗಾಳಿ ಎಷ್ಟೂ ಮುಖ್ಯವೋ ಹಾಗೆಯೇ ನಮ್ಮ ಜ್ಞಾನ ವಿಕಾಸಕ್ಕೆ ಗ್ರಂಥಾಲಯವು ಅಷ್ಟೇ ಮುಖ್ಯವಾಗಿದೆ. ಗ್ರಂಥಾಲಯದಿಂದ ಒಳ್ಳೆಯ ವಿಚಾರ, ಮೌಲ್ಯ ಶಿಕ್ಷಣ, ಜೀವನದ ಬಗ್ಗೆ ಭರವಸೆ ಮೂಡಿಸುವುದು, ಜ್ಞಾನ ಸಂಪಾದನೆ ಮಾಡಲು ಪುಸ್ತಕಗಳ ಪಾತ್ರ ಹಿರಿದಿದೆ. ಒಟ್ಟಾರೆಯಾಗಿ ಗ್ರಂಥಾಲಯಗಳು ಜ್ಞಾನ ವಿಕಾಸಕ್ಕೆ ದಾರಿದೀಪವಾಗಿವೆ ಎಂದು ಮುಖ್ಯ ಶಿಕ್ಷಕ ಮಲ್ಲೇಶ ಡಿ ಎಚ್ ಹೇಳಿದರು.

    ಅವರು ಗದಗ ತಾಲೂಕಿನ ಅಡವಿಸೋಮಾಪೂರ ಸಣ್ಣ ತಾಂಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪುಸ್ತಕಗಳು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆ ಅಲ್ಲದೆ ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಹಂಚುವ ಉನ್ನತ ಕಾರ್ಯ ಮಾಡುತ್ತವೆ ಎಂದರು.

    ಶಿಕ್ಷಕ ಎಸ್ ಜಿ ಅಮ್ಮಿನಭಾವಿ ಗ್ರಂಥಾಲಯ ಸಪ್ತಾಹ ಆಚರಣೆ ಕುರಿತು ಮಾತನಾಡಿದರು. ಶಿಕ್ಷಕಿಯರಾದ ಎಸ್ ಟಿ ಹಳಕಟ್ಟಿ , ಎಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ ಪವಾರ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಲಮಾಣಿ, ಎಫ್ ಎನ್ ಅತ್ತಿಕಟ್ಟಿ, ಸವಿತಾ ರಾಠೋಡ, ಸಕ್ಕುಬಾಯಿ ಲಮಾಣಿ, ಗಂಗವ್ವ ಲಮಾಣಿ, ದೇವಕ್ಕ ಲಮಾಣಿ, ಲಕ್ಷ್ಮಿ ಲಮಾಣಿ, ಸುಮಿತ್ರಾ ಲಮಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts