More

    ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸೋಣ – ಡಾ.ಪ್ರಭಾಕರ ಕೋರೆ

    ಬೆಳಗಾವಿ: ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಸಾಹಿತಿಗಳು ಮತ್ತು ಕವಿಗಳಿಗೆ ಮೀಸಲು. ಆದರೆ, ನಾನು ಸಾಹಿತಿ ಅಲ್ಲದಿದ್ದರೂ ನನ್ನನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

    ನಗರದ ಕ್ಯಾಂಪ್‌ನ ತಮ್ಮ ನಿವಾಸದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಬೆಳಗಾವಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.

    ಗಡಿಭಾಗ ಕಾಗವಾಡ ಪಟ್ಟಣದಲ್ಲಿ ಜ.30, 31ರಂದು ಜರುಗಲಿರುವ ಈ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಿ, ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸೋಣ. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮೆರಗು ತರೋಣ. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಇರೋಣ ಎಂದು ಅವರು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ಪ್ರೇಮಿಯಾಗಿರುವ ಡಾ.ಪ್ರಭಾಕರ ಕೋರೆ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಅವರ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಜರುಗಲಿರುವ ಸಮ್ಮೇಳನ ಯಶಸ್ವಿಯಾಗಲಿದೆ. ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಲಿದೆ ಎಂದರು.

    ಡಾ.ಬಸವರಾಜ ಜಗಜಂಪಿ ಮಾತನಾಡಿ, ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಬೇಕು. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಎಲ್ಲ ಗೋಷ್ಠಿಗಳೂ ಆರಂಭವಾಗಬೇಕು. ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು. ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ, ಡಾ.ಹೇಮಾವತಿ ಸೊನೊಳ್ಳಿ, ಪ್ರಕಾಶ ದೇಶಪಾಂಡೆ, ಡಾ.ಸಿದ್ಧನಗೌಡ ಕಾಗೆ, ಯ.ರು.ಪಾಟೀಲ, ಶ್ರೀಪಾದ ಕುಂಬಾರ, ಡಾ.ಸೋಮಶೇಖರ ಹಲಸಗಿ, ಬಾಬು ನಾಯಕ, ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಪಾರ್ವತಿ ಪಾಟೀಲ, ನೀಲಗಂಗಾ ಚರಂತಿಮಠ, ಶಶಿಕಲಾ ಯಲಿಗಾರ, ಭುವನೇಶ್ವರಿ ಪೂಜೇರಿ, ಅಕ್ಕಮಹಾದೇವಿ ತೆಗ್ಗಿ, ಇಂದಿರಾ ಮೋಟೆಬೆನ್ನೂರ, ಸುನಂದಾ ಎಮ್ಮಿ, ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ, ಅನಿತಾ ಮೂಗತ್ತಿ, ಜಯಶ್ರೀ ನಿರಾಕಾರಿ ಇದ್ದರು.


    ನಗರದ ಕ್ಯಾಂಪ್‌ನ ತಮ್ಮ ನಿವಾಸದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಬೆಳಗಾವಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಸ್ವೀಕರಿಸಿ ಅವರು ಮಾತನಾಡಿದರು.
    ಗಡಿಭಾಗ ಕಾಗವಾಡ ಪಟ್ಟಣದಲ್ಲಿ ಜ.30, 31ರಂದು ಜರುಗಲಿರುವ ಈ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಿ, ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಿಸೋಣ. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮೆರಗು ತರೋಣ. ಕನ್ನಡಿಗರೆಲ್ಲ ಒಗ್ಗಟ್ಟಾಗಿ ಇರೋಣ ಎಂದು ಅವರು ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ಪ್ರೇಮಿಯಾಗಿರುವ ಡಾ.ಪ್ರಭಾಕರ ಕೋರೆ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಅವರ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಜರುಗಲಿರುವ ಸಮ್ಮೇಳನ ಯಶಸ್ವಿಯಾಗಲಿದೆ. ಗಡಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಲಿದೆ ಎಂದರು. ಡಾ.ಬಸವರಾಜ ಜಗಜಂಪಿ ಮಾತನಾಡಿ, ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಬೇಕು. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಎಲ್ಲ ಗೋಷ್ಠಿಗಳೂ ಆರಂಭವಾಗಬೇಕು. ಜನರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.

    ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ, ಡಾ.ಹೇಮಾವತಿ ಸೊನೊಳ್ಳಿ, ಪ್ರಕಾಶ ದೇಶಪಾಂಡೆ, ಡಾ.ಸಿದ್ಧನಗೌಡ ಕಾಗೆ, ಯ.ರು.ಪಾಟೀಲ, ಶ್ರೀಪಾದ ಕುಂಬಾರ, ಡಾ.ಸೋಮಶೇಖರ ಹಲಸಗಿ, ಬಾಬು ನಾಯಕ, ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಪಾರ್ವತಿ ಪಾಟೀಲ, ನೀಲಗಂಗಾ ಚರಂತಿಮಠ, ಶಶಿಕಲಾ ಯಲಿಗಾರ, ಭುವನೇಶ್ವರಿ ಪೂಜೇರಿ, ಅಕ್ಕಮಹಾದೇವಿ ತೆಗ್ಗಿ, ಇಂದಿರಾ ಮೋಟೆಬೆನ್ನೂರ, ಸುನಂದಾ ಎಮ್ಮಿ, ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ, ಅನಿತಾ ಮೂಗತ್ತಿ, ಜಯಶ್ರೀ ನಿರಾಕಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts