More

    VIDEO| ಜನತಾ ಕರ್ಪ್ಯೂ ಆರಂಭಕ್ಕೂ ಮುನ್ನವೇ ದೇಶದ ಜನತೆಗೆ ಪ್ರಧಾನಿ ಮೋದಿ ಹೇಳಿದ್ದೇನು?

    ನವದೆಹಲಿ: ಕರೊನಾ ವೈರಸ್​ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಪ್ಯೂ ರಾಷ್ಟ್ರದೆಲ್ಲೆಡೆ ಉತ್ತಮ ಆರಂಭ ಪಡೆದುಕೊಂಡಿದೆ. ಇದಕ್ಕೂ ಮುನ್ನ ಟ್ವೀಟ್​ ಮಾಡಿರುವ ಪ್ರಧಾನಿ ನಾವೆಲ್ಲರೂ ಇದರಲ್ಲಿ ಭಾಗವಹಿಸೋಣ ಎಂದು ಮತ್ತೊಮ್ಮೆ ದೇಶದ ಜನತೆಯನ್ನು ಹುರಿದುಂಬಿಸಿದ್ದಾರೆ.

    ನಾವೆಲ್ಲರೂ ಜನತಾ ಕರ್ಪ್ಯೂನಲ್ಲಿ ಭಾಗವಾಗುವುದರಿಂದ ಕಿಲ್ಲರ್​​ ಕರೊನಾ ವೈರಸ್​ ವಿರುದ್ಧ ಹೋರಾಡಲು ನಮಗೆಲ್ಲ ಅದ್ಭುತ ಶಕ್ತಿ ಬರಲಿದೆ. ನಾವು ಈಗ ತೆಗೆದುಕೊಳ್ಳುವ ಕ್ರಮ ಮುಂದಿನ ದಿನದಲ್ಲಿ ಸಹಕಾರಿಯಾಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

    ಕೊನೆಯಲ್ಲಿ ಮನೆಯಲ್ಲಿಯೇ ಆರೋಗ್ಯವಾಗಿ ಉಳಿಯಿರಿ ಎನ್ನವ ಮೂಲಕ ಪ್ರಧಾನಿ ದೇಶದ ಜನತೆಯ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

    ಗುರುವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಮಾರ್ಚ್​ 22ರ ಭಾನುವಾರದಂದು ಜನರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕೆ ಜನತಾ ಕರ್ಪ್ಯೂ ಎಂದು ಹೆಸರಿಟ್ಟಿದ್ದರು. ಸಾಂಕ್ರಮಿಕ ಕರೊನಾ ಸರಪಳಿಗೆ ಬ್ರೇಕ್​ ಹಾಕಲು ಪ್ರಧಾನಿ ಮೋದಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರ.

    ಪ್ರಧಾನಿ ಅವರ ಆಶಯಕ್ಕೆ ಜನರು ಕೈಜೋಡಿಸಿದ್ದು ಮನೆಯಲ್ಲಿಯೇ ಉಳಿಯುವ ಮೂಲಕ ಜನತಾ ಕರ್ಪ್ಯೂಗೆ ಬಲ ತುಂಬಿದ್ದಾರೆ. ಇಡೀ ರಾಷ್ಟ್ರವೇ ಅಕ್ಷರಶಃ ಸ್ತಬ್ಧವಾಗಿದೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ರಾಜ್ಯದಲ್ಲಿ ಉತ್ತಮ ಆರಂಭ: ಇಡೀ ಕರ್ನಾಟಕವೇ ಸ್ತಬ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts