More

    ಸಂಪ್ರದಾಯ, ಪದ್ಧತಿಗಳು ಉಳಿಯಲಿ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಸರಾ ಹಬ್ಬದ ಹಮ್ಮಿಕೊಂಡಿರುವ ದುರ್ಗಾದೌಡ್‌ಗೆ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಭಾನುವಾರ ಚಾಲನೆ ನೀಡಿದರು.

    ಭಗವಾ ಧ್ವಜ ಮತ್ತು ದೇವಿಯ ಆಯುಧ ತ್ರಿಶೂಲಕ್ಕೆ ಪೂಜೆ ಸಲ್ಲಿಸಿ, ನವದೇವತೆಗಳ ಘೋಷಣೆ ಮೊಳಗಿಸಿದರು. ಇಲ್ಲಿಂದ ಆರಂಭವಾದ ಭಕ್ತರ ಮೊದಲ ದಿನದ ಧಾರ್ಮಿಕ ನಡಿಗೆಯು ನಸುಕಿನ 5.30ಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊರಟು ಹಳ್ಳದೆಲ್ಲಮ್ಮ, ಪುರಾತನ ಪ್ರಸಿದ್ಧ ಶ್ರೀ ಕೋಡಿಯಲ್ಲಮ್ಮ ದೇವಸ್ಥಾನಕ್ಕೆ ಸಾಗಿ, ಸಣ್ಣದ್ಯಾಮವ್ವ ದೇವಸ್ಥಾನದ ಬಳಿ ಮುಕ್ತಾಯವಾಯಿತು.

    ಈ ವೇಳೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಗುರುನಾಥ ದಾನಪ್ಪನವರ, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸಲು, ಸಂಪ್ರದಾಯ, ಪದ್ಧತಿ, ಆಚರಣೆಗಳನ್ನು ಉಳಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಕಳೆದ ವರ್ಷ ಸಾಕಷ್ಟು ಪ್ರಮಾಣದಲ್ಲಿ ಜನರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವರ್ಷದ ದಸರಾ ಹಬ್ಬದ ಎಲ್ಲ ದಿನಗಳಲ್ಲಿಯೂ ಈ ಧಾರ್ಮಿಕ ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕು ಎಂದರು.

    ದಸರಾ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಅರಳಿ ಮಾತನಾಡಿದರು.ಹಿರಿಯ ಮುಖಂಡ ಮಹೇಶ ಹೊಗೆಸೊಪ್ಪಿನ, ಭರಮಗೌಡ್ರ ಪಾಟೀಲ, ಶಿವನಗೌಡ್ರ ಪಾಟೀಲ, ವೆಂಕರಡ್ಡಿ ಗಿರಡ್ಡಿ, ಬಸವರಾಜ ಹೊಗೆಸೊಪ್ಪಿನ, ರಾಜಶೇಖರ ಶಿಗ್ಲಿಮಠ, ಜ್ಞಾನೋಭಾ ಬೋಮಲೆ, ರವಿ ಲಿಂಗಶೆಟ್ಟಿ, ಮಲ್ಲನಗೌಡ ಪಾಟೀಲ, ಬಸವರಾಜ ದಾನಿ, ಮುದಕಪ್ಪ ಮುಳಗುಂದ, ಶಿವಪ್ಪ ಡಂಬಳ, ಯಲ್ಲಪ್ಪ ಕೋರದಾಳ, ಹನುಮಂತಪ್ಪ ಗಡೇದ, ಮಂಜು ಬಳಿಗಾರ, ಪ್ರವೀಣ ಪಾಟೀಲ, ದೇವಪ್ಪ ಗಡೇದ, ಮಲ್ಲನಗೌಡ ಪಾಟೀಲ, ರಾಜೇಶ್ವರಿ ದಾನಪ್ಪನವರ, ಸುಜಾತಾ ಅತ್ತಿಗೇರಿ, ಪುಷ್ಪಾ ಅರಳಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

    ಸೋಮವಾರ ಸಣ್ಣದ್ಯಾಮವ್ವ ದೇವಸ್ಥಾನದಿಂದ ಶ್ರೀ ಬನಶಂಕರಿ ದೇವಸ್ಥಾನದವರೆಗೆ ದುರ್ಗಾದೌಡ್ ಧಾರ್ಮಿಕ ನಡಿಗೆ ಮುಂದುವರಿಯಲಿದೆ ಎಂದು ಕಾರ್ಯದರ್ಶಿ ರವಿ ಲಿಂಗಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts