More

    ಕಾರ್ಯದರ್ಶಿಗಳಿಗೆ ಸಂಘದ ಬಗ್ಗೆ ಅರಿವಿರಲಿ

    ಪಾಂಡವಪುರ: ಡೇರಿ ಕಾರ್ಯದರ್ಶಿಗಳಿಗೆ ಸಂಘದ ಬಗ್ಗೆ ಅರಿವಿದ್ದರೆ ಮಾತ್ರ ಸಹಕಾರ ಸಂಘವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

    ಪಟ್ಟಣದ ಕಸಾಪ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡೇರಿ ಕಾರ್ಯದರ್ಶಿಗಳಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.’

    ಕಾರ್ಯದರ್ಶಿಗಳು ಉತ್ತಮವಾಗಿ ಕೆಲಸ ನಿರ್ವಹಿಸಲು ತರಬೇತಿ ಅಗತ್ಯವಾಗಿದೆ. ತಾವು ನಿರ್ವಹಿಸುವ ಹುದ್ದೆಯ ಬಗ್ಗೆ ಅರಿವಿಲ್ಲದಿದ್ದರೆ ಷೇರುದಾರರು ಕೇಳುವ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಜತೆಗೆ ಅರಿವಿನ ಕೊರತೆ ಇದ್ದರೆ ಡೇರಿ ಚುನಾವಣೆಗಳಲ್ಲೂ ತಪ್ಪುಗಳು ನುಸುಳುವ ಸಾಧ್ಯತೆಗಳಿರುತ್ತದೆ. ಸಹಕಾರ ಸಂಘದ ಚುನಾವಣೆಗಳಲ್ಲಿ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದ್ದು, ಇತ್ತೀಚಿನ ಚುನಾವಣೆಗಳಲ್ಲಿ ಆ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಒಕ್ಕೂಟಕ್ಕೆ ನಿತ್ಯ 10 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ. ಅಷ್ಟೂ ಹಾಲು ಮಾರಾಟವಾದರೆ ಒಕ್ಕೂಟಕ್ಕೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಮಾರಾಟವಾಗದೆ ಉಳಿಯುವ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಮಾರಾಟ ಮಾಡಿದರೆ ನಷ್ಟ ಸಂಭವಿಸುತ್ತದೆ. ಮನ್‌ಮುಲ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೈಮರೆತರೆ ಒಕ್ಕೂಟವನ್ನು ಮುಚ್ಚಬೇಕಾದ ಪರಿಸ್ಥಿತಿ ತಲುಪಬೇಕಾಗುತ್ತದೆ. ಉತ್ಪಾದಕರು ಕೂಡ ಹಾಲಿನ ಗುಣಮಟ್ಟ ಕಾಯ್ದುಕೊಂಡು ಒಕ್ಕೂಟದ ಜತೆ ಕೈಜೋಡಿಸಿಬೇಕು ಎಂದರು.

    ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್ ಮಾತನಾಡಿ, ಈ ಹಿಂದೆ ಮನ್‌ಮುಲ್ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಪೇಡ ಇತ್ಯಾದಿಗಳು ಸೇರಿದಂತೆ ಕೇವಲ 3.5 ಲಕ್ಷ ಲೀಟರ್ ಹಾಲನ್ನು ಮಾತ್ರ ಮರಾಟ ಮಾಡಲು ಸಾಧ್ಯವಾಗುತ್ತಿತ್ತು. ಇತ್ತೀಚೆಗೆ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದು, ನಿತ್ಯ 6.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಈ ಬೆಳವಣಿಗೆಗೆ ಎಲ್ಲರ ಶ್ರಮ ಮತ್ತು ಸಹಕಾರ ಕಾರಣವಾಗಿದೆ ಎಂದರು.

    ಜಿಲ್ಲಾ ಸಹಕಾರ ಒಕ್ಕೂಟದ ಶಿವಕುಮಾರ್, ವಿಜಯಕುಮಾರ್, ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿ ಎಚ್.ಎನ್.ಉಷಾ, ಜಗದೀಶ್, ನಿತಿನ್, ಅಭಿಲಾಷ್, ಪ್ರಜ್ವಲ್‌ಗೌಡ, ಡಾ.ರೇಣುಕಾ, ಮನುಜಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts