More

    ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಯಾಗಲಿ

    ಧಾರವಾಡ: ದೇಶದ ರೈತರ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಯೋಜನೆ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.

    ಕೇಂದ್ರದ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ 11ನೇ ದಿನದ ಸರದಿ ಧರಣಿ ಸ್ಥಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ರೈತರು ಗೋವಿನಜೋಳ ಒಕ್ಕಣೆ ಮಾಡಿ 4 ತಿಂಗಳಾಗಿವೆ. ಸರ್ಕಾರ 1,850 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಉತ್ತರ ಕರ್ನಾಟಕದ ಯಾವ ಜಿಲ್ಲೆಯಲ್ಲೂ ಈವರೆಗೆ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಕೃಷಿ ಸಮ್ಮಾನ್ ಯೋಜನೆಯಡಿ ವಾರ್ಷಿಕ 6,000 ರೂ. ನೀಡದೆ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸಬೇಕು ಎಂದರು.

    ಧರಣಿ: ಬುಧವಾರದ ಧರಣಿಯಲ್ಲಿ ಅಬ್ದುಲ್ ಖಾನ್, ನರಹರಿ ಕಾಗಿನೆಲೆ, ಶ್ರೀಶೈಲಗೌಡ ಕಮತರ, ಸಲೀಂ ಸಂಗನಮುಲ್ಲಾ, ಲಕ್ಷ್ಮಣ ಬಕ್ಕಾಯಿ, ಸಿದ್ದಪ್ಪ ಕಳಸಣ್ಣವರ, ಸಚಿನ್ ಮುದರಡ್ಡಿ, ನವೀನ ಹೊಸಮನಿ ಹಾಗೂ ಬಲ್ಲರವಾಡ, ಹೆಬಸೂರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಅಮ್ಮಿನಭಾವಿ ಗ್ರಾಮದ ಷಣ್ಮುಖಪ್ಪ ಅಮರಶೆಟ್ಟಿ, ರಂಗಪ್ಪ ಭೋವಿ, ಹನುಮಂತಪ್ಪ ಕಂಬಾರ, ಬಸಪ್ಪ ದನದಮನಿ, ಮಾಳಪ್ಪ ಸುಣಗಾರ, ಇತರರು ಭಜನೆಯ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts