More

    ಗೃಹರಕ್ಷಕ ಸಿಬ್ಬಂದಿಗೂ ಸರ್ಕಾರ ಸೌಲಭ್ಯ ನೀಡಲಿ

    ನರಗುಂದ: ಪೊಲೀಸ್ ಇಲಾಖೆಯ ವಿವಿಧ ಕಾರ್ಯಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಅತ್ಯುತ್ತಮವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಗೃಹರಕ್ಷಕ ದಳದ ಬೋಧಕ ಕಿರಣಕುಮಾರ ಕಟಗಿ ಹೇಳಿದರು.
    ಪಟ್ಟಣದ ಗೃಹರಕ್ಷಕ ದಳದ ಕಚೇರಿಯಲ್ಲಿ ತಾಲೂಕಿನ ಎಲ್ಲ ಗೃಹರಕ್ಷಕ ದಳದ ಸಿಬ್ಬಂದಿಗೆ ಸರ್ಕಾರದಿಂದ ಕೊಡಮಾಡುವ ಸಮವಸ್ತ್ರಗಳನ್ನು ಇತ್ತೀಚೆಗೆ ವಿತರಿಸಿ ಅವರು ಮಾತನಾಡಿದರು.

    ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ, ಚುನಾವಣೆ, ಇನ್ನಿತರ ತುರ್ತು ಸಂದರ್ಭಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಗೃಹರಕ್ಷಕ ದಳದ ಸಿಬ್ಬಂದಿಯ ಕಾಯಕ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ ತಿಂಗಳು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಗೃಹರಕ್ಷಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

    ಗೃಹರಕ್ಷಕ ದಳದ ನರಗುಂದ ತಾಲೂಕು ಘಟಕಾಧಿಕಾರಿ ದೇವಪ್ಪ ಈಟಿ ಮಾತನಾಡಿ, ಪೊಲೀಸರಿಗೆ ತುರ್ತು ಅಗತ್ಯಗಳಿದ್ದಾಗ ಅಲ್ಲಿ ಗೃಹರಕ್ಷಕ ಸಿಬ್ಬಂದಿ ಹಾಜರಿರುತ್ತಾರೆ. ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿ ಕಾಲಕಾಲಕ್ಕೆ ಇಲಾಖೆಯಿಂದ ನೀಡುವ ತರಬೇತಿ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು. ಪ್ರತಿ ಮಂಗಳವಾರ ನರಗುಂದದಲ್ಲಿ ನಡೆಯುವ ಪರೇಡ್‌ಗೆ ಯಾರಾದರೂ ಗೈರು ಹಾಜರಾದರೆ ಅಂತವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ವಿಶ್ವನಾಥ ಯಳಮಲಿ, ಮಾಜಿ ಘಟಕಾಧಿಕಾರಿ ಬಿ.ಪಿ. ಸವದಿ, ಬಸವರಾಜ ನಾಯಕ, ಬುಡ್ನೇಸಾಬ ಸುರೇಬಾನ, ಎಲ್.ಎಲ್. ಚಲವಾದಿ, ಎಸ್.ಎಸ್. ಹಿರೇಮಠ, ವೀರೇಶ ಬರಗಿ, ಎಫ್.ಎನ್. ಸನ್ನಿ, ಟಿ.ಆರ್. ತಾಯಣ್ಣವರ, ಎನ್.ಕೆ. ಪಿಂಜಾರ, ಎಂ.ಎಂ. ಬಡಿಗೇರ, ಸಿ.ವೈ. ಅಣ್ಣಿಗೇರಿ, ವಿ.ಸಿ. ಮಠಪತಿ, ಸಿ.ಎ. ಚಪ್ಪಳಗಾಂವಿ, ಆರ್.ಎಸ್. ಹಟ್ಟಿ, ಎಸ್.ಎನ್. ಕೋಣನ್ನವರ, ಟಿ.ಬಿ. ನರಗುಂದ, ಎಂ.ಜಿ. ತಳವಾರ, ಕಲ್ಮೇಶ ಬನೋಜರ, ವೈ.ಎಸ್. ಲೆಂಗೆ, ಎಂ.ಎನ್. ಕುಂಬಾರ, ಕೆ.ಐ. ಬೀರನೂರ, ಎಸ್.ಎಂ. ನಾಗನೂರ, ವೈ.ಎಲ್. ಕಾಳೆ, ವಿ.ಬಿ. ವಡ್ಡಿಗೇರಿ, ಎಸ್.ಬಿ. ಪಟ್ಟಣದ, ಕೆ.ಎಚ್. ಗುಗ್ಗರಿ, ಐ.ಡಿ. ಗೊಂಬಿ, ಸಿ.ಆರ್. ಖಾನಪೇಠ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts