More

    ಅರಣ್ಯ ಇಲಾಖೆ ಗಡಿ ಗುರುತು ಸ್ಥಗಿತಗೊಳಿಸಲಿ

    ಶೃಂಗೇರಿ: ಅರಣ್ಯ ಇಲಾಖೆ ಸೆಕ್ಷನ್ (41) ಅಡಿ ಗಡಿ ಗುರುತು ಮಾಡುತ್ತಿದೆ ಹಾಗೂ ಕಾಂಕ್ರೀಟ್ ಬ್ಲಾಕ್‌ಗಳನ್ನು ನಿರ್ಮಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. 2005ರ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಮೀಸಲು ಅರಣ್ಯದಿಂದ ಹತ್ತು ಸಾವಿರ ಹೆಕ್ಟೇರ್ ಪ್ರದೇಶವನ್ನು ಹಿಂಪಡೆಯಬೇಕು. ಅದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಆಗಬೇಕು ಎಂದು ಮಲೆನಾಡು ನಾಗರಿಕ ಹಕ್ಕುಗಳ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದ್ದಾರೆ.

    ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಪ್ರತಿ ಸರ್ವೇ ನಂಬರ್‌ಗಳಿಂದ ಕಂದಾಯ ಭೂಮಿ ಹಿಂಪಡೆಯಲು ಗುರುತಿಸಿದ ಗಡಿ ವ್ಯತ್ಯಾಸ ಆಗುತ್ತದೆ. ಅಂದಿನ ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯಲ್ಲಿ ಮೂರು ಬಾರಿ ಜಿಲ್ಲೆಯ ಒತ್ತುವರಿ ಕುರಿತು ಮಾಹಿತಿ ಪಡೆದಿದ್ದರು. ಮೊದಲ ಬಾರಿಗೆ 74 ಸಾವಿರ ಎಕರೆ ಅವಶ್ಯಕತೆ ಇದೆ ಎಂಬ ವರದಿ ಇದೆ. ಎರಡನೇ ಬಾರಿ 34 ಸಾವಿರ ಎಕರೆಗೆ ಇಳಿಸಲಾಗಿದೆ. ಮೂರನೇ ಅವಧಿಯಲ್ಲಿ 24 ಸಾವಿರ ಎಕರೆಗೆ ಕಡಿಮೆಗೊಳಿಸಲಾಗಿದೆ. ಇದರಲ್ಲಿ ಗೊಂದಲವಿದೆ. ವಾಸ್ತವ ಯಾವುದು ಎಂಬುದನ್ನು ಅರಿತು ಒತ್ತುವರಿ ಜಾಗ ಹಿಂಪಡೆಯಲು ರಾಜ್ಯ ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts