More

    ಲೇಖಕನಿಗೆ ಮಾನವೀಯ ಪ್ರಜ್ಞೆ ಇರಲಿ

    ರಾಣೆಬೆನ್ನೂರ: ಲೇಖಕನಿಗೆ ನೈತಿಕ, ಮಾನವೀಯ ಪ್ರಜ್ಞೆ ಇರಬೇಕು. ಆತ ಬರೆಯುವ ಲೇಖನಗಳು ಸಮಾಜದಲ್ಲಾಗುವ ಉತ್ತಮ ಘಟನೆಗಳಿಗೆ ದಾರಿದೀಪವಾಗಿರಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಹೇಳಿದರು.

    ನಗರದ ಬಿಎಜೆಎಸ್​ಎಸ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ನಾಮದೇವ ಕಾಗದಗಾರ ರಚಿಸಿದ ‘ದೇವರಿಗೂ ಬೀಗ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಬರಹಗಾರರಿಗೆ ಆಧುನಿಕ, ವೈಚಾರಿಕ ಮನಸ್ಥಿತಿಗಳಿರಬೇಕು. ವೈಚಾರಿಕತೆಗಿಂತ, ಆಧುನಿಕ ಮನಸ್ಥಿತಿಯಿಂದ ಲೋಕದ ವ್ಯವಹಾರಗಳನ್ನು ನಿರ್ವಹಿಸಬಹುದು. ವರ್ತಮಾನವನ್ನು ಸುಂದರವಾಗಿಸುವ ಜತೆಗೆ ಬದುಕನ್ನು ಪ್ರೀತಿಸುವುದು ಹೇಗೆ ಎಂಬುದನ್ನು ಪ್ರಸ್ತುತಪಡಿಸಬೇಕು ಎಂದರು.

    ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ಸರ್ಕಾರಿ ಪದವಿ ಕಾಲೇಜ್ ಪ್ರಾಧ್ಯಾಪಕ ಡಾ. ಪಲ್ಲವ ವೆಂಕಟೇಶ ಕೃತಿ ಕುರಿತು ವಿವರಿಸಿದರು. ಕಲಾವಿದರಾದ ಬಸವರಾಜ ಸಾವಕ್ಕನವರ, ಅನಂತಪ್ಪ ತಹಸೀಲ್ದಾರ್, ಹೋರಾಟಗಾರ ಪುರುಷೋತ್ತಮ ತೋರಣಗಟ್ಟ ಗಂಟಿಕೋಟೆ ಅವರನ್ನು ಸನ್ಮಾನಿಸಲಾಯಿತು.

    ಸುಮಂಗಲಾ ಹೊಸಳ್ಳಿ, ಭೂಮಿಕಾ ತೋಟದ, ನಾಗರಾಜ ಹುಡೇದ, ಅಮರನಾಥ ಭೂತೆ, ದೇವರಾಜ ಹುಣಿಸಿಕಟ್ಟಿ, ದಾಕ್ಷಾಯಣಿ ಉದಗಟ್ಟಿ, ಪ್ರಭಾಕರ ಶಿಗ್ಲಿ, ಶಿವಾನಂದ ಬುಳ್ಳಮ್ಮನವರ, ನಿರ್ಮಲಾ ಲಮಾಣಿ, ಕವನಾ ಕೋಣನತಂಬಿಗೆ, ಮಹೇಶ ದೇವಗಿರಿಮಠ, ಆರ್.ಕೆ. ಹುಬ್ಬಳ್ಳಿ ಮತ್ತಿತರರು ಕವನ ವಾಚನ ಮಾಡಿದರು.

    ಬಿಎಜೆಎಸ್​ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಎಂ. ಮಂಜುನಾಥ ಬಮ್ಮನಕಟ್ಟಿ, ಕಾಂತೇಶ ಅಂಬಿಗೇರ, ಸವಿತಾ ಮಲ್ಲಾಡದ, ಎಂ.ಈ. ಶಿವಕುಮಾರ ಹೊನ್ನಾಳಿ, ಡಾ. ಗಿರೀಶ ಕೆಂಚಪ್ಪನವರ, ಹರೀಶ ಬಡಿಗೇರ, ಚಂದ್ರು ಅಂಗೂರ, ಉಮೇಶ ಹನುಮನಾಳ ಇತರರು ಉಪಸ್ಥಿತರಿದ್ದರು. ಸೌಜನ್ಯಾ ಹೊಸಳ್ಳಿ ಪ್ರಾರ್ಥಿಸಿದರು. ವಿರೂಪಾಕ್ಷಪ್ಪ ಜತ್ತಿ ಸ್ವಾಗತಿಸಿದರು. ಇಂದಿರಾ ಕೊಪ್ಪದ ವಂದಿಸಿದರು. ನಗರದ ಕಾಗದ ಸಾಂಗತ್ಯ ವೇದಿಕೆ, ಗದಗನ ಧನ್ಯಾ ಪ್ರಕಾಶನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts