More

    ವಿದ್ಯಾರ್ಥಿಗಳ ಕುಟುಂಬದ ಆತಂಕ ದೂರ ಮಾಡಲಿ


    ಬ್ಯಾಡಗಿ: ಯೂಕ್ರೇನ್​ನಲ್ಲಿ ಸಿಲುಕಿರುವ ಬ್ಯಾಡಗಿಯ ವ್ಯೆದ್ಯ ವಿದ್ಯಾರ್ಥಿ ಕುಶಲ ಸಂಕಣ್ಣನವರ ಪಾಲಕರ ಮನೆಗೆ ಶನಿವಾರ ಶಾಸಕ ಎಚ್.ಕೆ.ಪಾಟೀಲ ಭೇಟಿ ನೀಡಿ ಧೈರ್ಯ ಹೇಳಿದರು.
    ಇಲ್ಲಿನ ವಿದ್ಯಾನಗರದ ವಿದ್ಯಾರ್ಥಿಯ ನಿವಾಸದಲ್ಲಿ ಪಾಲಕರಿಗೆ ಸಮಾಧಾನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂಕ್ರೇನ್​ನಲ್ಲಿ ಸಿಲುಕಿರುವ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ತಲುಪಬೇಕು. ಈ ಸಮಯದಲ್ಲಿ ಯಾರ ಮೇಲೂ ದೂರುವ ಬದಲಾಗಿ ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಬೇಕು. ಅವರ ಕುಟುಂಬಗಳ ಆತಂಕ ದೂರಮಾಡಬೇಕಿದೆ. ಅಲ್ಲಿನ ಕೆಲ ವಿದ್ಯಾರ್ಥಿಗಳು ಮಾಹಿತಿ ನೀಡಿದಂತೆ ದೇಶದತ್ತ ಎಲ್ಲರೂ ಮರಳುತ್ತಿದ್ದಾರೆ. ಪಾಲಕರಲ್ಲಿ ಆತಂಕ ಬೇಡ ಎಂದರು.
    ಜಿಲ್ಲೆಗೊಂದು ಮೆಡಿಕಲ್ ಕಾಲೇಜ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೊಂದು, ದೊಡ್ಡ ಜಿಲ್ಲೆಗಳಿದ್ದರೆ ಎರಡೆರಡು ಕಾಲೇಜ್ ಮಂಜೂರು ಮಾಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು. ಇದರಿಂದ ಎಲ್ಲ ವರ್ಗದವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದರು.
    ಬಜೆಟ್​ನಲ್ಲಿ ದೊಡ್ಡ ಯೋಜನೆಗಳಿಲ್ಲ: ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಹೇಳಿಕೊಳ್ಳುವಂತ ದೊಡ್ಡ ಯೋಜನೆಗಳಿಲ್ಲ. 5.18 ಲಕ್ಷ ಕೋಟಿ ರೂಪಾಯಿ ಸರ್ಕಾರದ ಮೇಲೆ ಸಾಲದ ಹೊರೆಯಿದ್ದು, ಆರ್ಥಿಕ ನೀತಿ ಮೀರಿ ಸಾಲವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts