More

    ಶಿಕ್ಷಕರು ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿ



    ಮೈಸೂರು: ಶಿಕ್ಷಕರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆಂಬುದು ಅವರ ನಿವೃತ್ತಿ ದಿನದಂದು ತಿಳಿಯುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಿವರಾಜು ಅಭಿಪ್ರಾಯಪಟ್ಟರು.


    ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮುಖ್ಯ ಶಿಕ್ಷಕ ಡಿ.ರಾಜ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದರ ಜತೆಗೆ ಗ್ರಾಮೀಣ ಮಕ್ಕಳ ಬದುಕಿಗೆ ದಾರಿದೀಪವಾಗಬೇಕು. ಆಗಮಾತ್ರ ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಈ ಶಾಲೆಯ ಮುಖ್ಯ ಶಿಕ್ಷಕರು ಉದಾಹರಣೆ ಎಂದರು.
    ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿದರು. ಮುಖ್ಯಶಿಕ್ಷಕ ರಾಜು ದಂಪತಿಯನ್ನು ಗ್ರಾಮಸ್ಥರು ಮತ್ತು ಮಕ್ಕಳು ಆತ್ಮೀಯವಾಗಿ ಅಭಿನಂದಿಸಿದರು.


    ಬಿಆರ್‌ಪಿಗಳಾದ ಶ್ರೀನಿಧಿ, ಮನೋಹರ್, ರವೀಂದ್ರ, ಬಿಇಐಆರ್‌ಟಿ ಎಸ್.ಬಿ.ಪುಟ್ಟರಾಜು, ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಎಸ್.ಮಹದೇವಪ್ಪ, ಸದಸ್ಯರಾದ ಯುವರಾಜ್, ಜಿಲ್ಲಾ ಶಿಕ್ಷಕರ ಸಂಘದ ಸದಸ್ಯ ಜಾವಿದ್‌ಪಾಷ, ಸಿಆರ್‌ಪಿಗಳಾದ ಬಿ.ನಾಗೇಶ್, ಮಂಜುನಾಯಕ್, ನಟರಾಜು, ಮುಖ್ಯಶಿಕ್ಷಕರಾದ ರಮೇಶ್, ಎಚ್.ಬಿ.ನಾಗೇಶ್, ರಾಮ್‌ರಾಜ್, ಭರತ್‌ಭೂಷಣ್, ಶ್ವೇತ, ಚಂದ್ರೇಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್, ಸದಸ್ಯರಾದ ನಾಗೇಗೌಡ, ಗ್ರಾ.ಪಂ. ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts