More

    ದೇಸಿ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಆಗಲಿ

    ಬಸವನಬಾಗೇವಾಡಿ: ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ನಾಡಿನ ಎಲ್ಲ ಜನತೆ ಕನ್ನಡದಲ್ಲಿ ಮಾತನಾಡುವ ಜತೆಗೆ ನಾಡು, ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಹೊತ್ತ ಕನ್ನಡ ರಥ ಮೆರವಣಿಗೆ ಬಸವೇಶ್ವರ ದೇವಾಲಯದಿಂದ ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ವೃತ್ತ ಮುಖಾಂತರ ಸಂಚರಿಸಿದ ವೇಳೆ ಗುರುವಾರ ಅವರು ಮಾತನಾಡಿದರು.

    ಕನ್ನಡ ಭಾಷೆಗೆ ತನ್ನದೇಯಾದ ಇತಿಹಾಸವಿದೆ. ಕನ್ನಡ ಸಾಹಿತ್ಯದ ಮೂಲಕ ಕನ್ನಡ ಬೆಳೆಸೋಣ ಉಳಿಸೋಣ ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮೈಸೂರು ರಾಜ್ಯಕ್ಕೆ ಮರುನಾಮಕರಣ ಮಾಡಿ ಕರ್ನಾಟಕವೆಂದು ಹೆಸರಿಟ್ಟಿದ್ದು ಐವತ್ತು ವರ್ಷ ಗತಿಸಿದ್ದರಿಂದ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಾಡಿನಾದ್ಯಂತ ಕನ್ನಡ ರಥ ಸಂಚರಿಸುತ್ತಿದೆ ಎಂದು ಹೇಳಿದರು.

    ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಕನ್ನಡ ಹಾಡಿಗೆ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಕುಣಿದು ಕುಪ್ಪಳಿಸಿದರು.

    ಪುರಸಭೆ ಮುಖ್ಯಾಧಿಕಾರಿ ಎಂ.ಎನ್. ಚಿತ್ತರಗಿ, ತಾ.ಪಂ ಇಒ ಡಾ.ಯುವರಾಜ ಹನಗಂಡಿ, ಬಿಇಒ ವಸಂತ ರಾಠೋಡ, ಕ.ರಾ.ಸ.ನೌ. ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಕ.ಸಾ.ಪ ತಾಲೂಕಾಧ್ಯಕ್ಷ ಶಿವಾನಂದ ಡೋಣೂರ, ಬಸವರಾಜ ಸೋಮಪುರ, ಕೋಟ್ರೇಶ ಹೆಗಡ್ಯಾಳ, ಅಶೋಕ ಹಂಚಲಿ, ಬಸವರಾಜ ಮೇಟಿ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ, ಶಿವು ಮಡಕೇಶ್ವರ, ಬಿ.ಬಿ. ಚಕ್ರಮನಿ. ಬಸವರಾಜ ಚಿಂಚೊಳ್ಳಿ, ಅನುಜಾ ಗುಬ್ಬಾ, ವಾಣಿ ಕುಲಕರ್ಣಿ, ಮಹಾದೇವಿ ಬಿರಾದಾರ, ಶಾಂತಾ ಚೌರಿ, ರವಿಗೌಡ ಚಿಕ್ಕೊಂಡ, ಉಮೇಶ ಕೌಲಗಿ, ಎಚ್.ಬಿ.ಬಾರಿಕಾಯಿ., ಎಸ್.ಬಿ.ದಳವಾಯಿ, ವಿವೇಕಾನಂದ ಕಲ್ಯಾಣಶೆಟ್ಟಿ, ಕಮಲಾ ಪದರಾ, ರಮೇಶ ಪೂಜಾರಿ, ಮಹೇಶ ಬಳಗಾನೂರ, ವಿರೇಶ ಹಟ್ಟಿ, ಅಪ್ಪು ದನಶೆಟ್ಟಿ, ಪಿ.ಯು. ರಾಠೋಡ, ಎಂ. ವಿ. ಗೊಬ್ಬರ, ಶರಣಪ್ಪ ಓಂಕಾರ. ಮಹಾಂತೇಶ ಚಕ್ರವರ್ತಿ, ಮಹಾಂತೇಶ ಸಾಸಬಾಳ, ರಮಜಾನ ಹೆಬ್ಬಾಳ, ಸುಭಾಸಚಂದ್ರ ಹಡಪದ, ರೋಹಿಣಿ ರೋಣದ, ಶ್ರೀದೇವಿ ಸಾಳುಂಕೆ, ಪುಷ್ಪಾ ಕುಲಕರ್ಣಿ, ಹಣಮಂತ ಮಾದರ, ಗೀತಾ ಗಬ್ಬೂರ, ಅನಸೂಯ ಜುಗತಿ, ಜಯಶ್ರೀ ಗದಗ, ವಿದ್ಯಾವತಿ ಕಿಣಗಿ, ಶಾರದಾ ಜಿಡ್ಡಿಮನಿ, ಮುತ್ತಗಿ ಗ್ರಾ.ಪಂ. ಅಧ್ಯಕ್ಷ ನೀಲಾ ಪಾಟೀಲ, ಉಪಾಧ್ಯಕ್ಷ ಕವಿತಾ ಬಡಿಗೇರ, ಪ್ರೇಮಕುಮಾರ ಮ್ಯಾಗೇರಿ, ಪಿ.ಡಿ.ಓ. ಬಿ.ಎಸ್. ಬದಡಿಗೇರ, ಸೀತಾ ದೊಡ್ಡಮನಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts