More

    ಸತ್ಯಶುದ್ಧ ಕಾಯಕದಿಂದ ಬದುಕುವಂತಾಗಲಿ

    ಮುಂಡರಗಿ: ಇತ್ತೀಚೆಗೆ ಶಿಕ್ಷಣ ವ್ಯಾಪಾರವಾಗಿದೆ. ಸಂಸ್ಕಾರಯುಕ್ತ ಶಿಕ್ಷಣ ಅವಶ್ಯವಿದೆ. ನಮ್ಮೊಳಗೆ ಬದಲಾವಣೆ ಕಾಣುವ ಕೆಲಸ ಮಾಡಬೇಕು. ದೇಶದಲ್ಲಿ ಅನೇಕ ತತ್ವಜ್ಞಾನಿಗಳು, ದಾರ್ಶನಿಕರು ಬಂದಿದ್ದಾರೆ. ಆದರೂ ಅಪರಾಧ, ಅತ್ಯಾಚಾರ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸತ್ಯಶುದ್ಧ ಕಾಯಕದಿಂದ ಬಾಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ 154ನೇ ಯಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಶತಮಾನೋತ್ಸವ ಸಂಭ್ರಮ ಪ್ರಾರಂಭೋತ್ಸವ ಹಾಗೂ ಜ.ಅ. ವಿದ್ಯಾ ಸಮಿತಿಯ ಸಿಬ್ಬಂದಿ ಸಮಾವೇಶದಲ್ಲಿ ಅವರು ಮಾತನಾಡಿದರು. ಈಗ ವಿದ್ಯೆ ದೊರೆಯುತ್ತಿದೆ. ಆದರೆ, ವಿನಯತೆ ಬರಲಿಲ್ಲ. ಸಂಸ್ಕಾರ ಕುರಿತ ಶಿಬಿರ ನಡೆಸಿ ತಿಳಿವಳಿಕೆ ನೀಡುವ ಕೆಲಸ ಆಗಬೇಕು. ನೈತಿಕ ಮೌಲ್ಯಗಳನ್ನು ಬಿತ್ತುವ ಕೆಲಸ ಆಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

    ಡಿಡಿಪಿಐ ಎಂ.ಎ. ರಡ್ಡೇರ, ಹೂವಿನಶಿಗ್ಲಿ ಶ್ರೀ ಚನ್ನವೀರ ಸ್ವಾಮೀಜಿ, ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ನಿವೃತ್ತ ಮುಖ್ಯಶಿಕ್ಷಕ ಎಸ್.ಎಫ್. ಮಳ್ಳಿ ಮಾತನಾಡಿದರು. ಶತಮಾನೋತ್ಸವ ಭವನ ನಿರ್ವಣಕ್ಕೆ ಸಹಾಯಧನ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಸಮಿತಿಯ ಶಾಲಾ, ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಅಭಿನವ ಚನ್ನಬಸವ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ವಿದ್ಯಾ ಸಮಿತಿ ಕಾರ್ಯಾಧ್ಯಕ್ಷ ರಾಮಸ್ವಾಮಿ ಹೆಗ್ಗಡಾಳ, ಎ.ಕೆ. ಬೆಲ್ಲದ, ಕರಬಸಪ್ಪ ಹಂಚಿನಾಳ, ವಿ.ಎಫ್. ಗುಡದಪ್ಪನವರ, ಡಿ.ಡಿ. ಮೋರನಾಳ, ಆರ್.ಬಿ. ಡಂಬಳಮಠ, ಶಿವಯೋಗಿ ಕೊಪ್ಪಳ, ಪಿ.ಬಿ. ಹಿರೇಗೌಡ್ರ, ಇತರರಿದ್ದರು.

    ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ವಾರ್ಷಿಕ ಶೈಕ್ಷಣಿಕ ವರದಿ ಓದಿದರು. ಡಾ.ಆರ್.ಎಚ್. ಜಂಗಣವಾರಿ ಹಾಗೂ ಎಚ್.ಆರ್. ಬಿಪುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts