More

    ಹಿರಿಯರು ಜಾನಪದ ಕಲೆ ಬಳುವಳಿ ನೀಡಲಿ

    ಕಡೂರು: ಸತ್ಯ, ಪ್ರಾಮಾಣಿಕ, ದಯೆ, ಶ್ರಮದ ದುಡಿಮೆ ಮೌಲ್ಯಗಳು ಜನಪದ ಸಾಹಿತ್ಯ ಸಂಸ್ಕೃತಿಯಲ್ಲಿ ಅಡಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಕುಟುಂಬದ ಹಿರಿಯರ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

    ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಿರಿಯ ಜಾನಪದ ವಿದ್ವಾಂಸ ಕೆ.ಆರ್.ಲಿಂಗಪ್ಪ ಹುಟ್ಟಿ ಬೆಳೆದ ಕ್ಷೇತ್ರ ಜಾನಪದ ಮತ್ತು ಸಂಗೀತ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ. 1967ರಲ್ಲಿ ಅವರು ಆಯೋಜಿಸಿದ್ದ ಅಖಿಲ ಭಾರತ ಜಾನಪದ ಸಮ್ಮೇಳನವನ್ನು ಇಂದಿಗೂ ಹಿರಿಯರು ಸ್ಮರಿಸಿಕೊಳ್ಳುತ್ತಾರೆ ಎಂದರು.
    ಮುಂದಿನ ಪೀಳಿಗೆಗೆ ಜನಪದ ಕಲೆ, ಸಾಹಿತ್ಯ, ಸಂಗೀತ ಸಾಗಬೇಕಾದರೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು. ಉತ್ತಮ ಸಮಾಜ ಜನಪದ ಕಲೆ ಸಾಹಿತ್ಯ, ಸಂಗೀತದಲ್ಲಿ ಅಡಗಿದೆ. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕಿದೆ. ಜಾನಪದ ಕಲೆಯನ್ನು ಪ್ರದರ್ಶನ, ಪ್ರಚಾರ, ಪ್ರಸಾರದ ಮೂಲಕ ಉಳಿಸುವಲ್ಲಿ ಹಿರಿಯ ಕಲಾವಿದ ಟಿ.ನಿಂಗಪ್ಪ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
    ಸಮ್ಮೇಳನಾಧ್ಯಕ್ಷ ಟಿ.ನಿಂಗಪ್ಪ ಅವರನ್ನು ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯನ್ನು ಮಾಜಿ ಶಾಸಕ ಎಸ್.ಎಂ.ನಾಗರಾಜ್ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಸುಮಾರು 10 ಕಲಾತಂಡಗಳು ಭಾಗವಹಿಸಿದ್ದವು. ಕೋಲಾಟ, ಗೀಗಿ ಪದ ತಂಡ, ಸೋಮನ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಜಾನಪದ ನೃತ್ಯ, ಭಜನಾ ನೃತ್ಯ, ಸುಗ್ಗಿ ಕುಣಿತ ತಂಡ ಮುಂತಾದ ತಂಡಗಳು ಎತ್ತಿನ ಗಾಡಿಗಳು, ಸಾರೋಟು ಮೆರವಣಿಗೆಗೆ ಮೆರುಗು ನೀಡಿದವು.
    ಕಜಾಪ ತಾಲೂಕು ಅಧ್ಯಕ್ಷ ಡಾ. ಮಾಳೇನಹಳ್ಳಿ ಬಸಪ್ಪ, ಗೌರವಾಧ್ಯಕ್ಷ ಮರುಳುಸಿದ್ದಪ್ಪ, ಲಕ್ಷ್ಮೀದೇವಮ್ಮ, ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಗಡಿಹಳ್ಳಿ ಮಂಜುನಾಥ್, ತಿಪ್ಪೇಶ್, ಅಣ್ಣಯ್ಯ, ಪ್ರಕಾಶ್, ಜಿ.ನಟರಾಜ್, ಬುಕ್ಕಾಂಬುದಿ ಗುರುಮೂರ್ತಿ, ರಘುಮೂರ್ತಿ, ವಾಣಿ ಶ್ರೀನಿವಾಸ್, ರಚನಾ, ವಕೀಲ ವೆಂಕಟೇಶ್, ನಿಂಗಪ್ಪ, ಕಲಾವಿದ ಚಿಕ್ಕನಲ್ಲೂರು ಜಯಣ್ಣ, ಕುಂಕಾನಾಡು ನಾಗರಾಜ್, ಜಗದೀಶಾಚಾರ್, ತ್ಯಾಗದಕಟ್ಟೆ ಪ್ರಕಾಶ್, ಕಾರೇಹಳ್ಳಿ ಬಸವರಾಜಪ್ಪ, ನಿರಂಜನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts