More

    ಉದ್ಯೋಗ ಖಾತ್ರಿ ಕಾರ್ಮಿಕರ ಪರಿಸರ ಕಾಳಜಿ: ಕಲ್ಲುಗೋನಾಳದಲ್ಲಿ ಕೆರೆ ಹೂಳೆತ್ತುವ ಕಾರ್ಯ ಬಳಿಕ ಸಸಿಗಳ ನಾಟಿ

    ಕುಷ್ಟಗಿ: ಅಂಟರಠಾಣಾ ಗ್ರಾಪಂ ವ್ಯಾಪ್ತಿ ಕಲ್ಲುಗೋನಾಳ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಕೂಲಿಕಾರರು ಶ್ರಮದ ಜತೆಗೆ ಪರಿಸರ ಕಾಳಜಿ ತೋರುತ್ತಿದ್ದಾರೆ.

    ಕೆಲಸ ಮುಗಿಯುತ್ತಿದ್ದಂತೆ ಕೂಲಿಕಾರರು ಪರಿಕರಗಳೊಂದಿಗೆ ಮನೆಯತ್ತ ಹೆಜ್ಜೆ ಹಾಕುವುದು ಸಾಮಾನ್ಯ. ಆದರೆ, ಅಂಟರಠಾಣಾ ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಕೆಲಸದ ಅವಧಿಯ ನಂತರ ಕೆರೆ ಪ್ರದೇಶದಲ್ಲಿ ವಿವಿಧ ಸಸಿಗಳನ್ನು ನೆಟ್ಟು ಇತರರಿಗೆ ಮಾದರಿಯಾಗುತ್ತಿದ್ದಾರೆ. ಕೆರೆ ಪ್ರದೇಶದಲ್ಲಿ ನೆಡುವುದಾಗಿ ಹೇಳಿದ್ದರಿಂದ ಹುನಗುಂದ ತಾಲೂಕು ಅಮೀನಗಡದ ಸಸ್ಯ ಪಾಲನಾ(ನರ್ಸರಿ) ಕೇಂದ್ರದವರು ಸಸಿಗಳನ್ನು ಉಚಿತವಾಗಿ ನೀಡಿ ಕಾರ್ಮಿಕರ ಪರಿಸರ ಕಾಳಜಿಗೆ ಸಾಥ್ ನೀಡಿದ್ದಾರೆ. ಕಲ್ಲುಗೋನಾಳ ಹೊರವಲಯದ ಕೆರೆ ಹಾಗೂ ಪಕ್ಕದ ದೇವಸ್ಥಾನ ಸುತ್ತ ಆಲ, ಹೊಂಗೆ, ಬೇವು ಇತರ ನೆರಳು ನೀಡುವ 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಸುರಕ್ಷತೆಗೆ ಸುತ್ತ ಮುಳ್ಳಿನ ಬೇಲಿ ಅಳವಡಿಸಿದ್ದಾರೆ. ಕಾಮಗಾರಿ ಮುಗಿಯುವವರೆಗೆ ಸಸಿ ನೆಡುವ ಕಾರ್ಯ ನಡೆಯಲಿದ್ದು, ದುಡಿಮೆಯ ಜತೆಗೆ ಪರಿಸರದ ಕಾಳಜಿ ವಹಿಸುತ್ತಿರುವುದು ಖುಷಿ ನೀಡಿದೆ ಎನ್ನುತ್ತಾರೆ ಖಾತ್ರಿ ಕೂಲಿಕಾರರು.

    ನರೇಗಾ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಂಟರಠಾಣಾ ಗ್ರಾಪಂ ವ್ಯಾಪ್ತಿಯ ಕೂಲಿಕಾರರು ಕೆಲಸ ಮುಗಿದ ನಂತರ ಕೆರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ತೋರುತ್ತಿರುವುದು ಇತರ ಗ್ರಾಪಂಗಳಿಗೆ ಮಾದರಿಯಾಗಿದೆ.
    | ಶಿವಪ್ಪ ಸುಬೇದಾರ್ ತಾಪಂ ಇಒ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts