More

    ಹೋಟೆಲ್‌ಗೆ ನುಗ್ಗಿದ ಚಿರತೆ, ಕೋಣೆಯಲ್ಲಿ ಅಲ್ಲೋಲ..ಕಲ್ಲೋಲ..

    ರಾಜಸ್ಥಾನ: ಜೈಪುರದ ಖಾಸಗಿ ಕ್ಯಾಸಲ್ ಕನೋಟಾ ಹೆರಿಟೇಜ್ ಹೋಟೆಲ್​​ನಲ್ಲಿ  ಚಿರತೆ ಕಾಣಿಸಿಕೊಂಡಿದ್ದು ಸಂಚಲನ ಮೂಡಿಸಿದೆ.  ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

    ಮಾಹಿತಿ ಪ್ರಕಾರ, ಗುರುವಾರ ಬೆಳಗ್ಗೆ 9:40ಕ್ಕೆ ನಡೆದ ಘಟನೆಯಲ್ಲಿ ಜೈಪುರದ ಕ್ಯಾಸಲ್ ಕನೋಟಾ ಹೆರಿಟೇಜ್ ಹೋಟೆಲ್​​ಗೆ ಚಿರತೆ ನುಗ್ಗಿದೆ. ಚಿರತೆಯನ್ನು ಕಂಡ ಹೋಟೆಲ್ ಆಡಳಿತ ಮಂಡಳಿಯವರು ಕೊಠಡಿಗೆ ಹೊರಗಿನಿಂದ ಬೀಗ ಹಾಕಿ, ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಹೋಟೆಲ್ ಮಾಲೀಕ ಮಾನಸಿಂಗ್ ಕೂಡಲೇ ಅರಣ್ಯ ಇಲಾಖೆ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಹೋಟೆಲ್‌ನಲ್ಲಿದ್ದ ಪ್ರವಾಸಿಗರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಹೋಟೆಲ್ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಮತ್ತು ವನ್ಯಜೀವಿ ರಕ್ಷಣಾ ತಂಡಗಳು ಚಿರತೆಯನ್ನು ಶಾಂತಗೊಳಿಸಲು ಎರಡು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟಿದ್ದಾರೆ.

    ಚಿರತೆ ಕೋಣೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ತಂಡ ಆಗಮಿಸಿ ಚಿರತೆಯನ್ನು ಸೆರೆಹಿಡಿಯಲಾಗಿದ್ದು, ಹೋಟೆಲ್ ಸಿಬ್ಬಂದಿ ಹಾಗೂ ಅತಿಥಿಗಳಿಗೆ ಸಮಾಧಾನ ತಂದಿದೆ.

    ಅಧಿಕಾರಿಯೊಬ್ಬರು ಮಾತನಾಡಿ, ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಪಡೆದ ತಕ್ಷಣ ನಮ್ಮ ತಂಡ ಮತ್ತು ಜೈಪುರ ಮೃಗಾಲಯದ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ತ್ವರಿತವಾಗಿ ಸ್ಥಳಕ್ಕೆ ತಲುಪಿತು. ಅದೃಷ್ಟವಶಾತ್ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಚಿರತೆಯನ್ನು ನಹರ್‌ಗಢ ರಕ್ಷಣಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ. ಬಸ್ಸಿ ರೇಂಜರ್ ಕನೋಟಾದ ಸುತ್ತಮುತ್ತ ಹೇರಳವಾಗಿರುವ ವನ್ಯಜೀವಿಗಳಿವೆ. ಈ ಪ್ರಾಣಿಗಳು ಆಹಾರ ಅಥವಾ ನೀರಿನ ಹುಡುಕಾಟದಲ್ಲಿ ನಗರ ಪ್ರದೇಶಕ್ಕೆ ಬರುವುದು ಸಾಮಾನ್ಯ ಘಟನೆಯಾಗಿದೆ ಎಂದಿದ್ದಾರೆ.

    10 ವರ್ಷದ ಹಿಂದೆಯೇ ಬ್ಯಾಡ್ಮಿಂಟನ್ ಆಟಗಾರನ ಪ್ರೀತಿಯಲ್ಲಿ ಬಿದ್ದ ನಟಿ ತಾಪ್ಸಿ ಪನ್ನು

    ನೀವು ಶ್ರೀರಾಮನ ನೋಡಲು ಅಯೋಧ್ಯೆಗೆ ಹೋದರೆ, ಈ ತಿಂಡಿಗಳನ್ನು ಸವಿಯಲು ಮರೆಯದಿರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts