More

    VIDEO: ಚಿರತೆ ಮರ ಹತ್ತುವುದು ತೀರ ಸಾಮಾನ್ಯ, ಆದರೆ ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಏರುವ ಈ ದೃಶ್ಯವನ್ನು ಮಿಸ್​ ಮಾಡ್ಕೋಳ್ಬೇಡಿ…

    ಐಎಫ್​ಎಸ್​ ಅಧಿಕಾರಿ ಪ್ರವೀಣ್​ ಕಸ್ವಾನ್​ ಎಂಬುವರು ಮೈನವಿರೇಳಿಸುವ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿರತೆ ಮರ ಹತ್ತುವುದು ಗೊತ್ತಿರುವ ವಿಷಯ. ಆದರೆ ಈ ವಿಡಿಯೋದಲ್ಲಿ ಕಾಣುವ ಚಿರತೆ ತಾನು ಬೇಟೆಯಾಡಿದ ಪ್ರಾಣಿಯ ಮೃತದೇಹದೊಂದಿಗೆ ಮರ ಏರುತ್ತದೆ. ಇದನ್ನು ನೋಡಿದರೆ ಮೈ ಜುಂ ಎನ್ನಿಸದೆ ಇರದು…!

    ದಕ್ಷಿಣ ಆಫ್ರಿಕಾದ ಕ್ರುಗರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಮಾ.24ರಂದು ಸಂಜೆ 6ಗಂಟೆಗೆ ಸೆರೆ ಹಿಡಿದಿರುವ ವಿಡಿಯೋ ಇದು ಎಂದು ಐಎಫ್​ಎಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಚಿರತೆ ತಾನು ಬೇಟೆಯಾಡಿದ ದೊಡ್ಡ ಜಿಂಕೆಯ ಮೃತದೇಹವನ್ನು ಬಾಯಲ್ಲಿ ಕಚ್ಚಿಕೊಂಡು ಒಂದು ನೇರವಾದ ಮರವನ್ನು ಏರುವುದನ್ನು ನೋಡಿದರೆ ಅಬ್ಬಾ ಎನ್ನಿಸುತ್ತದೆ.

    ಈ ಅದ್ಭುತ ದೃಶ್ಯವನ್ನೊಳಗೊಂಡ ವಿಡಿಯೋ ಈಗಾಗಲೇ 20,000ದಷ್ಟು ವೀವ್ಸ್​ ಪಡೆದಿದೆ. 1400ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಬಂದಿವೆ.

    ಚಿರತೆಯ ಸಾಮರ್ಥ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೆಂಥಾ ಎನರ್ಜಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

    VIDEO: ಚಿರತೆ ಮರ ಹತ್ತುವುದು ತೀರ ಸಾಮಾನ್ಯ, ಆದರೆ ಬೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಮರ ಏರುವ ಈ ದೃಶ್ಯವನ್ನು ಮಿಸ್​ ಮಾಡ್ಕೋಳ್ಬೇಡಿ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts