More

    ಬೇಗೂರು ರಸ್ತೆಯ ಬಳಿ ಕಾಣಿಸಿಕೊಂಡ ಚಿರತೆಯನ್ನು ಹಿಡಿದ ಅರಣ್ಯ ರಕ್ಷಕರು

    ಬೆಂಗಳೂರು: ಒಂದು ವಾರದಿಂದ ಮತ್ತೆ ಮತ್ತೆ ಕಾಣಿಸಿಕೊಂಡು ಬೇಗೂರು ರಸ್ತೆಯ ನಿವಾಸಿಗಳ ನಿದ್ದೆ ಕೆಡಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಜನವರಿ 22 ರಂದು ಬೇಗೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಸಾಂಗ್ ಅಪಾರ್ಟ್​ಮೆಂಟ್​ ಆವರಣದಲ್ಲಿ ಸಿಸಿಟಿವಿಯಲ್ಲಿ ಚಿರತೆಯೊಂದರ ಓಡಾಟ ಸೆರೆಯಾಗಿತ್ತು. ಈ ಚಿರತೆಯನ್ನು ಹಿಡಿಯಲು ಕ್ಯಾಮೆರಾ ಟ್ರ್ಯಾಪ್​ ಮತ್ತು ಹಲವು ಕಬ್ಬಿಣದ ಗೂಡುಗಳನ್ನು ಇರಿಸಿದರೂ ಚಿರತೆ ಪತ್ತೆಯಾಗಿರಲಿಲ್ಲ.

    ಸಿಸಿಟಿವಿ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆಯ ಹೆಜ್ಜೆಗುರುತುಗಳೂ ಅಲ್ಲಲ್ಲಿ ಕಾಣುತ್ತಿದ್ದವು. ಈ ಬಗ್ಗೆ ನಿವಾಸಿಗಳಲ್ಲಿ ಬಹಳ ಆತಂಕ ಉಂಟಾಗಿತ್ತು. ಭಾನುವಾರ ರಾತ್ರಿ ಕೂಡ ಸ್ಥಳೀಯರ ಕಣ್ಣಿಗೆ ಈ ಚಿರತೆ ಕಾಣಿಸಿಕೊಂಡಿತ್ತು.

    ಸೋಮವಾರ ಬೆಳಿಗ್ಗೆ 6.30 ರ ಹೊತ್ತಿಗೆ ಅಪಾರ್ಟ್​ಮೆಂಟಿನ ಹಿಂಭಾಗದಲ್ಲಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆಹಾರದ ಹುಡುಕಾಟದಲ್ಲಿ ಜನವಾಸ ಪ್ರದೇಶಕ್ಕೆ ಬಂದಿದ್ದ ಈ ಚಿರತೆಯನ್ನು ಬನ್ನೆರುಘಟ್ಟ ಅರಣ್ಯದಲ್ಲಿ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

    14 ತಿಂಗಳಿಂದ ಕಾಣೆಯಾಗಿದ್ದವ ಬಾವಿಯಲ್ಲಿ ಪ್ರತ್ಯಕ್ಷನಾದ !

    ಕೇಂದ್ರ ಬಜೆಟ್​| ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts