More

    ಜೈಲರ್​ ಸಿನಿಮಾದ ದಾಖಲೆ ಮುರಿಯುತ್ತಾ ಲಿಯೋ…ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್​​ನಲ್ಲೇ ಕೋಟಿ ಕಲೆಕ್ಷನ್​..?

    Leo Pre-booking: ವಿಜಯ್ ಮತ್ತು ಲೋಕೇಶ್ ಕನಕರಾಜ್ ಒಟ್ಟಾಗಿ ಮಾಡುತ್ತಿರುವ ಎರಡನೇ ಚಿತ್ರವೇ ಲಿಯೋ. ಮಾಸ್ಟರ್ ನಂತರ ಎರಡನೇ ಬಾರಿ ಈ ಜೋಡಿ ಒಟ್ಟಾಗಿದೆ. ಲಲಿತ್ ಕುಮಾರ್ ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ.


    ಸಂಜಯ್ ದತ್, ಮಿಶ್ಕಿನ್, ಅರ್ಜುನ್, ಸ್ಯಾಂಡಿ ಮಾಸ್ಟರ್, ಮ್ಯಾಥ್ಯೂ ಥಾಮಸ್, ಬಿಗ್ ಬಾಸ್ ಜನನಿ, ಪ್ರಿಯಾ ಆನಂದ್, ಗೌತಮ್ ಮೆನನ್ ದೊಡ್ಡ ತಾರೆಯರು ಚಿತ್ರ ತಾರಾಬಳಗಲ್ಲಿದ್ದಾರೆ. ಸಿನಿಮಾದಲ್ಲಿ ನಟಿ ತ್ರಿಶಾ ವಿಜಯ್​ಗೆ ನಾಯಕಿಯಾಗಿದ್ದಾರೆ.


    ಅನಿರುದ್ಧ್ ಸಂಗೀತ, ಮನೋಜ್ ಪರಮಹಂಸ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ ಹೀಗೆ ಹಲವು ಅನುಭವಿ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದು, ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಹಚ್ಚಿಸುತ್ತಿದೆ. ಇದೀಗ ಜೈಲರ್​ ರೆಕಾರ್ಡನ್ನ ಲಿಯೋ ಮುರಿಯಲಿದೆಯೇ ಎಂಬ ಪ್ರಶ್ನೆಗಳು ಹೆಚ್ಚುತ್ತಿದೆ.


    ಅದಕ್ಕೆ ಕಾರಣ ಲಿಯೋ ಚಿತ್ರದ ಪ್ರೀ ರಿಲೀಸ್​​ ಬುಕ್ಕಿಂಗ್ಸ್​​. ಹೌದು ಲಿಯೋ ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ತಮಿಳುನಾಡು ಮಾತ್ರವಲ್ಲದೆ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ಲಿಯೋ ಚಿತ್ರದ ಟಿಕೆಟ್‌ಗೆ ಭಾರಿ ಬೇಡಿಕೆ ಇದೆ ಎನ್ನಲಾಗಿದೆ.


    ಬಹುತೇಕ ಸ್ಥಳಗಳಲ್ಲಿ ಲಿಯೋ ಚಿತ್ರದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ತಮಿಳುನಾಡು ಮಾತ್ರವಲ್ಲದೆ ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲೂ ಲಿಯೋ ಚಿತ್ರದ ಟಿಕೆಟ್‌ಗೆ ಭಾರಿ ಬೇಡಿಕೆ ಇದೆ ಎನ್ನಲಾಗಿದೆ.


    ಕಳೆದ ತಿಂಗಳು ವಿದೇಶದಲ್ಲಿ ಪ್ರಾರಂಭವಾದ ಪ್ರೀ ಬುಕ್ಕಿಂಗ್… ಕಳೆದ ವಾರ ಭಾರತದಲ್ಲಿ ಪ್ರಾರಂಭವಾಯಿತು. ಯೋ ಬಿಡುಗಡೆಗೆ ಕೇವಲ 3 ದಿನಗಳು ಬಾಕಿ ಉಳಿದಿದ್ದು, ವಿಶ್ವದಾದ್ಯಂತ ಇದರ ಬುಕಿಂಗ್‌ಗಳು ವೇಗವಾಗಿ ನಡೆಯುತ್ತಿದೆ.

    ಲಿಯೋ ಚಿತ್ರ ಕೇವಲ ಪ್ರೀ ಬುಕ್ಕಿಂಗ್ ಮೂಲಕವೇ 60 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದರಲ್ಲಿ ತಮಿಳುನಾಡಿನಲ್ಲಿ 6.25 ಕೋಟಿ, ಕೇರಳದಲ್ಲಿ 7 ಕೋಟಿ, ಕರ್ನಾಟಕದಲ್ಲಿ 6.25 ಕೋಟಿ, ಇತರೆ ರಾಜ್ಯಗಳಲ್ಲಿ 1 ಕೋಟಿ, ಭಾರತವೊಂದರಲ್ಲೇ 20.5 ಕೋಟಿ ಕಲೆಕ್ಷನ್ ಮಾಡಿದೆ.

    ಅಲ್ಲದೇ ಹೊರ ದೇಶಗಳಲ್ಲಿ 6 ವಾರ ಮುಂಚಿತವಾಗಿಯೇ ಬುಕ್ಕಿಂಗ್ ಆಗುತ್ತಿರುವುದರಿಂದ ಅಲ್ಲಿ 39.5 ಕೋಟಿ ರೂ. ಸಂಗ್ರಹವಾಗಿದೆ ಎಂಬ ಮಾಹಿತಿ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts