More

    ಇಂಡಿಯಾಗೆ ಸ್ಪರ್ಧಾತ್ಮಕ ಸವಾಲು

    ಮುಂಬೈ: ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ನಾಯಕತ್ವದ ಇಂಡಿಯಾ ಲೆಜೆಂಡ್ಸ್ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆಲುವಿಗೆ ಸ್ಮರ್ಧಾತ್ಮಕ ಸವಾಲು ಪಡೆದುಕೊಂಡಿದೆ. ಆಡುವ ದಿನಗಳಲ್ಲೂ ಭಾರತವನ್ನು ಕಾಡಿದ್ದ ಶಿವನಾರಾಯಣ್ ಚಂದ್ರಪಾಲ್, ಸೌಹಾರ್ದ ಮುಖಾಮುಖಿಯಲ್ಲೂ ಅರ್ಧಶತಕ ಬಾರಿಸಿ ಇಂಡಿಯಾ ಪಾಲಿಗೆ ಕಗ್ಗಂಟಾದರು.

    ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ತಂಡದ ನಾಯಕ ಸಚಿನ್ ಬೌಲಿಂಗ್ ಆಯ್ದುಕೊಂಡರು. ಮೊದಲ ವಿಕೆಟ್​ಗೆ 40 ರನ್​ಗಳ ಉತ್ತಮ ಜತೆಯಾಟ ಹಾಗೂ ಶಿವನಾರಾಯಣ್ ಚಂದ್ರಪಾಲ್ (61ರನ್, 41 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನಡುವೆಯೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ 8 ವಿಕೆಟ್​ಗೆ 151 ರನ್ ಪೇರಿಸಿತು.

    15 ಎಸೆತ ಎದುರಿಸಿದ ಲಾರಾ, ಬಾರಿಸಿದ ನಾಲ್ಕು ಬೌಂಡರಿಗಳು ಅವರ ಆಡುವ ದಿನಗಳನ್ನು ನೆನಪಿಸಿತು. ಇವೆಲ್ಲದರ ನಡುವೆ ಗಮನಸೆಳೆದಿದ್ದು ಚಂದ್ರಪಾಲ್ ಆಟ. ಆರಂಭದಲ್ಲಿ ಕ್ರೀಸ್​ಗೆ ಹೊಂದಿಕೊಳ್ಳಲು ಒದ್ದಾಡಿದ ಚಂದ್ರಪಾಲ್, ಒಮ್ಮೆ ಲಯ ಕಂಡುಕೊಂಡ ಬಳಿಕ ತಮ್ಮ ಆಟವನ್ನು ಆಡಲು ಆರಂಭಿಸಿದರು. 19ನೇ ಓವರ್​ನ ಮೊದಲ ಎಸೆತದಲ್ಲಿ ಔಟಾಗುವವರೆಗೂ ಇಂಡಿಯಾ ಲೆಜೆಂಡ್ಸ್ ಬೌಲಿಂಗ್​ಅನ್ನು ಕಾಡಿದರು.

    ಬೌಲಿಂಗ್, ಫೀಲ್ಡಿಂಗ್​ನಲ್ಲಿ ಮಿಂಚಿದ ಜಹೀರ್ ಖಾನ್

    ಇಂಡಿಯಾ ಲಜೆಂಡ್ಸ್​ನ ಬೌಲಿಂಗ್​ನಲ್ಲಿ ಗಮನಸೆಳೆದಿದ್ದು 41 ವರ್ಷದ ಜಹೀರ್ ಖಾನ್. 18ನೇ ಓವರ್​ನ ಕೊನೇ ಎಸೆತದಲ್ಲಿ ರಿಡ್ಲೆ ಜಾಕೋಬ್ಸ್​ರನ್ನು ಔಟ್ ಮಾಡಲು ಜಹೀರ್ ಎಸೆದ ಯಾರ್ಕರ್ ಎಸೆತ, ಯುವ ಬೌಲರ್​ಗಳಿಗೆ ಪಾಠದಂತಿತ್ತು. ಅದಕ್ಕೂ ಮುನ್ನ ರಿಕಾಡೋ ಪಾವೆಲ್, ಡೀಪ್ ಸ್ಕೆ್ವೕರ್​ಲೆಗ್​ನತ್ತ ಬಾರಿಸಿದ್ದ ಚೆಂಡನ್ನು ಜಹೀರ್ ಖಾನ್ ಅತ್ಯಾಕರ್ಷಕವಾಗಿ ಹಿಡಿದರು. ಬಹುಶಃ ಅವರ ಕ್ರಿಕೆಟ್ ದಿನಗಳಲ್ಲೂ ಇಂಥ ಕ್ಯಾಚ್ ಹಿಡಿದಿರಲಿಲ್ಲ.

    ನೆನಪಿಸಿದ 90ರ ದಿನಗಳು!

    90ರ ದಶಕದ ದಿನಗಳನ್ನು ನೆನಪಿಸುವಂಥ ವಾತಾವರಣ ವಾಂಖೆಡೆಯಲ್ಲಿ ಸೃಷ್ಟಿಯಾಗಿತ್ತು. ಕಾರ್ಲ್ ಹೂಪರ್, ಲಾರಾ, ಚಂದ್ರಪಾಲ್, ರಿಡ್ಲೆ ಜಾಕೊಬ್ಸ್, ಸಚಿನ್, ಸೆಹ್ವಾಗ್, ಜಹೀರ್, ಯುವರಾಜ್ ಹೆಸರುಗಳು ಟೀಮ್ ಲೈನ್​ಅಪ್​ನಲ್ಲಿ ನೋಡುವುದಕ್ಕಿಂತ ಆನಂದ ಮತ್ತೊಂದಿರುತ್ತಿರಲಿಲ್ಲ. ಅಂಥದ್ದೇ ಕ್ಷಣ ಶನಿವಾರ ಕಾಣಸಿಕ್ಕಿತು. ಸೌಹಾರ್ದ ಪಂದ್ಯವಾಗಿದ್ದರೂ, ಎಲ್ಲಿಯೂ ಆಟದ ಗುಣಮಟ್ಟ ಕುಸಿಯದಂತೆ ಕ್ರಿಕೆಟ್ ದಿಗ್ಗಜರು ಆಡುವ ಮೂಲಕ 90ರ ದಶಕದ ದಿನಗಳನ್ನು ನೆನಪಿಸಿದರು. ಇವರ ಆಟವನ್ನು ನೋಡಲು ಸ್ಟೇಡಿಯಂ ಕೂಡ ಭರ್ತಿಯಾಗಿದ್ದವು.

    ವಿಂಡೀಸ್ ಲೆಜೆಂಡ್ಸ್: 8 ವಿಕೆಟ್​ಗೆ 150

    ಡರೇನ್ ಗಂಗಾ ಬಿ ಜಹೀರ್ 32

    ಚಂದ್ರಪಾಲ್ ಸಿ ಸಮೀರ್ ದಿಘ ಬಿ ಮುನಾಫ್ 61

    ಲಾರಾ ಸ್ಟಂಪ್ಡ್ ಸಮೀರ್ ದಿಘ ಬಿ ಇರ್ಫಾನ್ 17

    ಹ್ಯಾಟ್ ಸ್ಟಂಪ್ಡ್ ಸಮೀರ್ ದಿಘ ಬಿ ಓಜಾ 12

    ಕಾರ್ಲ್ ಹೂಪರ್ ಸಿ ಕೈಫ್ ಬಿ ಓಜಾ 2

    ರಿಕಾಡೋ ಪಾವೆಲ್ ಸಿ ಜಹೀರ್ ಬಿ ಮುನಾಫ್ 1

    ರಿಡ್ಲೆ ಜಾಕೊಬ್ಸ್ ಬಿ ಜಹೀರ್ 2

    ಟಿನೊ ಬೆಸ್ಟ್ ರನೌಟ್ (ಸಮೀರ್ ದಿಘ) 11

    ಸುಲೆಮಾನ್ ಬೆನ್ ಔಟಾಗದೆ 1

    ಪೆಡ್ರೋ ಕಾಲಿನ್ಸ್ ಔಟಾಗದೆ 3

    ಇತರ: 8. ವಿಕೆಟ್ ಪತನ: 1-40, 2-64, 3-109, 4-117, 5-123, 6-135, 7-135, 8-147. ಬೌಲಿಂಗ್: ಜಹೀರ್ 4-0-30-2, ಗೋನಿ 3-0-23-0, ಮುನಾಫ್ 4-0-24-2, ಓಜಾ 4-0-27-2, ಇರ್ಫಾನ್ 2-0-21-1, ಸಾಯಿರಾಜ್ 2-0-12-0, ಯುವರಾಜ್ 1-0-10-0.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts