More

    ಮಥುರಾ ಕೃಷ್ಣ ಜನ್ಮಭೂಮಿ ಸ್ವಾಧೀನಕ್ಕೆ ಕಾನೂನು ಸಮರ

    ನವದೆಹಲಿ: ಶ್ರೀಕೃಷ್ಣ ಜನಿಸಿದ ಮಥುರಾದ ಭೂಮಿಯನ್ನು ಮರುಸ್ವಾಧೀನಕ್ಕೆ ನೀಡಬೇಕು ಎಂದು ಕೋರಿ ‘ಶ್ರೀಕೃಷ್ಣ ವಿರಾಜಮಾನ್’ ಮಥುರಾದ ಹಿರಿಯ ಶ್ರೇಣಿ ಕೋರ್ಟ್​ನಲ್ಲಿ ಸಿವಿಲ್ ದಾವೆ ದಾಖಲಿಸಿದೆ. ವಿವಾದಿತ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯಿಂದ ತೆರವುಗೊಳಿಸಿ, ಇಡೀ 13.37 ಎಕರೆಯನ್ನು ತನ್ನ ಸುಪರ್ದಿಗೆ ಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಮೌಜಾ ಮಥುರಾ ಬಜಾರ್​ನ ಕತ್ರ ಕೇಶವದೇವ್ ಖೇವತ್​ನಲ್ಲಿ ಭಗವಾನ್ ಶ್ರೀಕೃಷ್ಣ ವಿರಾಜಮಾನವಾಗಿದ್ದಾನೆ. ಈ ಜಾಗ ಶ್ರೀಕೃಷ್ಣನಿಗೆ ಸೇರಿದ್ದು ಎಂದು ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಭಕ್ತರು ಈ ದಾವೆ ಹೂಡಿದ್ದಾರೆ.

    ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದದಲ್ಲಿ ರಾಮಲಲ್ಲಾನನ್ನೇ ಫಿರ್ಯಾದಿ ಎಂದು ಪರಿಗಣಿಸಿರುವಂತೆ ಈ ಪ್ರಕರಣದಲ್ಲಿ ಶ್ರೀಕೃಷ್ಣನನ್ನೇ ಈ ಭೂಮಿಯ (ಜನ್ಮಸ್ಥಾನ) ಒಡೆಯನೆಂದು ಪರಿಗಣಿಸಬೇಕು ಎಂದೂ ವಿನಂತಿ ಮಾಡಲಾಗಿದೆ. ಇಡೀ ಮಥುರಾ ಶ್ರೀಕೃಷ್ಣನಿಗೆ ಸೇರಿದ್ದು. ಖೇವತ್​ನ ನಂ.255 ಕತ್ರ ಕೇಶವದೇವ್​ನಲ್ಲಿರುವ ಶ್ರೀಕೃಷ್ಣ ಜನ್ಮಸ್ಥಾನವನ್ನು ಸುನ್ನಿ ವಕ್ಪ್ ಮಂಡಳಿಯ ಆದೇಶದ ಅನುಸಾರ ಈದ್ಗಾ ಮಸೀದಿ ಟ್ರಸ್ಟ್ ಆಡಳಿತ ಮಂಡಳಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ಇದನ್ನು ತೆರವುಗೊಳಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ದಾವೆದಾರರ ಪರ ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. 1991ರ ಪೂಜಾಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆಯು 1947ರಲ್ಲಿ ದೇಶದ ಧಾರ್ವಿುಕ ಸ್ಥಳಗಳಲ್ಲಿ ಇರುವ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಹೇಳಿದೆ. ಆದರೆ ಈ ಕಾಯ್ದೆಯಿಂದ ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದಕ್ಕಷ್ಟೆ ವಿನಾಯಿತಿ ನೀಡಲಾಗಿತ್ತು. ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ವಕೀಲ ವಿಷ್ಣು ಶಂಕರ್ ಜೈನ್ ಈಗಾಗಲೇ ಅರ್ಜಿ ದಾಖಲಿಸಿದ್ದಾರೆ. ಇದನ್ನೂ ಓದಿ: ಕೆಕೆಆರ್ ತಂಡಕ್ಕೆ 7 ವಿಕೆಟ್ ಜಯ

    ಅಯೋಧ್ಯೆ ತೀರ್ಪು

    ಶತಮಾನಕ್ಕೂ ಹಳೆಯ ವ್ಯಾಜ್ಯವಾದ ಅಯೋಧ್ಯೆಯ ರಾಮ ಜನ್ಮಭೂಮಿಗಾಗಿ ರಾಮಲಲ್ಲಾ ವಿರಾಜಮಾನ್ 1989ರಲ್ಲಿ ಸಿವಿಲ್ ಖಟ್ಲೆ ದಾಖಲಿಸಿ ವಿವಾದಿತ ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಿತ್ತು. ಸುಪ್ರೀಂಕೋರ್ಟ್ ಕಳೆದ ವರ್ಷ ನವೆಂಬರ್ 9ರಂದು ವಿವಾದಿತ ಸ್ಥಳ ರಾಮಲಲ್ಲಾಗೆ ಸೇರಬೇಕು ಎಂದು ತೀರ್ಪು ನೀಡಿತು. ಮಸೀದಿ ನಿರ್ವಿುಸಿಕೊಳ್ಳಲು ಮುಸ್ಲಿಮರಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನು ನೀಡುವಂತೆಯೂ ಸೂಚಿಸಿತ್ತು. ಇದನ್ನೂ ಓದಿ:  ಮತ್ತಷ್ಟು ತಗ್ಗಿತು ಕರೊನಾ ಪರೀಕ್ಷೆ ಖರ್ಚು.. ಕೋವಿಡ್​ ಟೆಸ್ಟ್​ ಬೆಲೆ ಇಳಿಸಿದ ಸರ್ಕಾರ..

    ಅರ್ಜಿದಾರರ ವಾದ ಏನು?

    ಮಥುರಾದ ಶ್ರೀಕೃಷ್ಣ ಜನ್ಮಸ್ಥಾನವಾದ ಕತ್ರ ಕೇಶವದೇವ್​ನಲ್ಲಿ ಶ್ರೀಕೃಷ್ಣ ದೇಗುಲವನ್ನು 1669-70ರಲ್ಲಿ ಔರಂಗಜೇಬ್ ಭಾಗಶಃ ನಾಶಮಾಡಿದ. ನಂತರ ಇಲ್ಲಿ ಕೆಲವರು ಈದ್ಗಾ ಮಸೀದಿಯನ್ನು ನಿರ್ವಿುಸಿದರು. ಮರಾಠರು ಆಗ್ರಾ ಮತ್ತು ಮಥುರಾವನ್ನು ವಶಪಡಿಸಿಕೊಂಡ ಮೇಲೆ ಕತ್ರ ಕೇಶವದೇವ್​ನಲ್ಲಿದ್ದ ಮಸೀದಿಯನ್ನು ತೆರವುಗೊಳಿಸಿ ಶ್ರೀಕೃಷ್ಣ ದೇಗುಲವನ್ನು ಜೀಣೋದ್ಧಾರ ಮಾಡಿದ್ದರು. 1815ರಲ್ಲಿ ಬ್ರಿಟಿಷ್ ಆಡಳಿತ ಕತ್ರ ಕೇಶವದೇವ್​ನ ಜಾಗವೂ ಸೇರಿ 13.37 ಎಕರೆಯನ್ನು ಹರಾಜು ಮಾಡಿತು. ಇದನ್ನು ಬನಾರಸ್​ನ ರಾಜಾ ಪಾಟ್ನಿಮಲ್ ಖರೀದಿಸಿದ. 1921ರಲ್ಲಿ ಕತ್ರ ಕೇಶವದೇವ್ ಜಾಗದ ಬಗ್ಗೆ ಮುಸ್ಲಿಮರು ಹೂಡಿದ್ದ ದಾವೆಯನ್ನು ಸಿವಿಲ್ ಕೋರ್ಟ್ ವಜಾ ಮಾಡಿತ್ತು. 1944ರಲ್ಲಿ ರಾಜಾ ಪಾಟ್ನಿಮಲ್​ನ ವಾರಸುದಾರರು 13.37 ಎಕರೆಯನ್ನು ಪಂಡಿತ್ ಮದನ ಮೋಹನ ಮಾಳವಿಯ, ಗೋಸ್ವಾಮಿ ಗಣೇಶ ದತ್, ಭಿಕೆನ್ ಲಾಲ್​ಜಿ ಆಟ್ರೆ ಅವರಿಗೆ -ಠಿ; 13,400ಕ್ಕೆ ಮಾರಾಟ ಮಾಡಿದ್ದರು. 13.37 ಎಕರೆಯ ನಿರ್ವಹಣೆಗೆ 1951ರಲ್ಲಿ ಟ್ರಸ್ಟ್ ರಚನೆ ಮಾಡಲಾಯಿತು. ಈ ಟ್ರಸ್ಟ್ ಭವ್ಯ ಮಂದಿರವನ್ನು ಕಟ್ಟಿತು. 1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಸೊಸೈಟಿ ಮತ್ತು ಶಾಹಿ ಮಸೀದಿ ಈದ್ಗಾ ಟ್ರಸ್ಟ್ ಮಧ್ಯೆ ರಾಜಿಸಂಧಾನ ನಡೆಯಿತು. ಈ ರಾಜಿ ಸಂಧಾನದ ಆಧಾರದ ಮೇಲೆ 1973ರ ಜುಲೈ 20ರಂದು ಮಥುರಾದ ಸಿವಿಲ್ ಕೋರ್ಟ್ ತೀರ್ಪು ನೀಡಿತು. ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ನಿರ್ವಣಗಳ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಿತು. ಈಗಲೂ ಇದೇ ಮುಂದುವರಿದಿದೆ. ಈ ಆದೇಶವನ್ನೂ ತೆರವುಗೊಳಿಸಬೇಕು ಎಂದು ಈಗ ಶ್ರೀಕೃಷ್ಣ ವಿರಾಜಮಾನ್ ಕೋರಿದೆ.

    ‘ಮನುಕುಲದ ಹಿತಾಸಕ್ತಿಯೇ ಭಾರತದ ಆದ್ಯತೆ..ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಸಹಾಯ ಮಾಡುತ್ತೇವೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts