More

    ಅನ್ಯಭಾಷೆಯ ಮೋಹ ಬಿಟ್ಟು ಕನ್ನಡ ಬಳಸಿ

    ಮಳವಳ್ಳಿ: ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಮ್ಮವರೇ ಮಾತೃಭಾಷೆ ಬಳಸುವ ಬದಲಿಗೆ ಅನ್ಯಭಾಷೆಯನ್ನು ಅನುಸರಿಸುತ್ತಿರುವುದರಿಂದ ಅಮೃತವಾಣಿಯಂತಹ ಕನ್ನಡ ಪರಿಮಳ ಪಸರಿಸುತ್ತಿಲ್ಲವೆಂದು ನಿವೃತ್ತ ಮುಖ್ಯಶಿಕ್ಷಕ ವಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

    ತಾಲೂಕಿನ ದೊಡ್ಡಬೂವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಮೊದಲು ನಮ್ಮ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಲ್ಲೂ ನಮ್ಮ ಸಂಸ್ಕೃತಿ, ನೆಲ, ಜಲ, ಭಾಷೆಯ ಅಭಿಮಾನವನ್ನು ರಾಷ್ಟ್ರದುದ್ದಗಲಕ್ಕೂ ವಿಸ್ತರಿಸುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಹೊರ ರಾಜ್ಯ-ರಾಷ್ಟ್ರಗಳಿಂದ ವಿವಿಧ ಉದ್ದೇಶಗಳನ್ನು ಬಯಸಿ ನಗರ ಪ್ರದೇಶಗಳಲ್ಲಿ ಬಂದು ನೆಲೆಸುವವರೊಡನೆ ನೆರೆಹೊರೆಯವರು ಅವರೊಡನೆ ನಮ್ಮದೇ ಭಾಷೆಯಲ್ಲಿ ಮಾತನಾಡುವ ಹಾಗೂ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

    ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಕೃಷ್ಣಗೌಡ ಹುಸ್ಕೂರು ಮಾತನಾಡಿ, ‘ಕನ್ನಡ ನಾಡು- ನುಡಿಗೆ ಪ್ರಾಚೀನ ಇತಿಹಾಸದ ಜತೆಗೆ ಭವ್ಯ ಪರಂಪರೆ ಹೊಂದುವ ಮೂಲಕ ಕನ್ನಡ ನಾಡು ಸಮೃದ್ಧ ನಾಡಾಗಿ ರೂಪುಗೊಂಡಿದ್ದು, ಕನ್ನಡ ಭಾಷೆ ನಮ್ಮ ಬದುಕು, ಉಸಿರಾಟ, ಆತ್ಮದಲ್ಲಿ ಬೆರೆತು ಹೋಗಿದೆ. ಕೇವಲ ಶಿಕ್ಷಣ ಸಂಸ್ಥೆಗಳು ನೀಡುವ ಪ್ರಮಾಣ ಪತ್ರಗಳಿಂದ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಬದಲಾಗಿ ಜನಭಾಷೆಯಾಗಿ ಪರಿವರ್ತನೆಗೊಂಡಾಗ ಮಾತ್ರ ನಮ್ಮ ಭಾಷೆಯ ಸೊಗಡು ಬೆಳವಣಿಗೆ ಆಗುತ್ತದೆ’ ಎಂದರು.

    ಕಾರ್ಯಕ್ರಮ ಆರಂಭಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಡನೆ ಮೆರವಣಿಗೆ ನಡೆಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕರಾದ ಡಿ.ಶಿವಪ್ಪ, ಆರ್.ಜಿ.ಮಹದೇವಸ್ವಾಮಿ, ಸಹ ಶಿಕ್ಷಕರಾದ ಅಣ್ಣಯ್ಯ, ಸುಂದ್ರಪ್ಪ, ಸುರೇಶ್, ನಾಗವೇಣಿ, ನಾಗರಾಜಾಚಾರಿ, ಮುಖಂಡ ಗಜೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts