More

    ಲೀಥಿಯಂ ಮರುಬಳಕೆ ಸಂಶೋಧನೆ

    ಉಡುಪಿ: ಭಾರತದಲ್ಲಿ ನೂರು ವರ್ಷಗಳ ಬಳಿಕ ‘ಲೀಥಿಯಂ’ ಲಭ್ಯವಾಗುವುದಿಲ್ಲ. ಬಳಿಕ ಕೊರತೆ ನೀಗಿಸಲು, ಮರು ಬಳಕೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಸಂಶೋಧನೆಗಳು ನಡೆಯಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎಸ್. ಶೇರಿಗಾರ್ ಹೇಳಿದರು.

    ಪೂರ್ಣಪ್ರಜ್ಞ ಕಾಲೇಜಿನ ರಸಾಯನಶಾಸ್ತ್ರ ವಿಭಾಗ, ಮಂಗಳೂರು ವಿ.ವಿ. ಪದವಿ ಕಾಲೇಜು ರಸಾಯನಶಾಸ್ತ್ರ ಶಿಕ್ಷಕರ ಸಂಘ, ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಶನಿವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ‘ಅಡ್ವಾನ್ಸಸ್ ಇನ್ ಇಲೆಕ್ಟ್ರೊಕೆಮಿಕಲ್ ರಿಸರ್ಚ್’ -ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

    ದಿಕ್ಸೂಚಿ ಭಾಷಣ ಮಾಡಿದ ಸುರತ್ಕಲ್ ಎನ್‌ಐಟಿಕೆ ರಸಾಯನಶಾಸ್ತ್ರ ವಿಭಾಗದ ಡೀನ್ ಪ್ರೊ.ಎ. ನಿತ್ಯಾನಂದ ಶೆಟ್ಟಿ, ಎಲ್ಲ ವೈಜ್ಞಾನಿಕ ಸಂಶೋಧನೆಗಳಿಗೆ ಮೂಲ ವಿಜ್ಞಾನವೇ ಆಧಾರ. ಯಾವುದೇ ಸಂಶೋಧನೆ ಮಾಡುವ ವಿದ್ಯಾರ್ಥಿಗಳು ವಿಷಯದ ಬಗ್ಗೆ ಆಸಕ್ತಿ ಹೊಂದಿರಬೇಕು. ದಿನಕಳೆದಂತೆ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ರಸಾಯನ ಶಾಸ್ತ್ರ ತಂತ್ರಜ್ಞಾನ ಭಾರತದ ಭವಿಷ್ಯವಾಗಿದೆ ಎಂದರು.

    ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ವಿಚಾರ ಸಂಕಿರಣ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಾಂಶುಪಾಲ ಡಾ.ಎ.ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ಸುಪರ್ಣಾ ವಂದಿಸಿ, ಸುಪ್ರಿಯಾ ಎಸ್, ದಿವ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.

    ಬೆಳಕು ಮತ್ತು ಕತ್ತಲೆಗಾಗಿ ಭಗವಂತ ನಡೆಸಿದ ಸಂಶೋಧನೆ ಸೂರ್ಯ ಮತ್ತು ಚಂದ್ರ. ಇದರಲ್ಲಿ ಬಾಧಕಗಳಿಲ್ಲ. ಒಂದು ವೇಳೆ ಬಳಕೆ ಮಾಡುವವ ತಪ್ಪು ಮಾಡಿದಲ್ಲಿ ಮಾತ್ರ ಬಾಧಕಗಳು ಬರುತ್ತವೆ ಹೊರತು ಸಂಶೋಧಕನ ಸಮಸ್ಯೆಯಿಂದಲ್ಲ. ಪ್ರಸ್ತುತ ನಡೆಯುತ್ತಿರುವ ಸಂಶೋಧನೆಗಳಲ್ಲಿ ಸಾಧಕಕ್ಕಿಂತ ಬಾಧಕಗಳೇ ಹೆಚ್ಚಿವೆ. ಸಾಧಕಗಳೇ ಕೂಡಿರುವ ಸಂಶೋಧನೆಗಳು ನಡೆಯಲಿ.
    – ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts