More

    ಜೀವನದಲ್ಲಿ ನಾಯಕತ್ವವೆಂಬುದು ಚಿನ್ನದಂಥ ಕೌಶಲ: ಗೇಮ್ ಸಂಸ್ಥಾಪಕ ರವಿ ವೆಂಕಟೇಶನ್

    ಬೆಂಗಳೂರು ಎಲ್ಲ ಕೌಶಲಕ್ಕಿಂತ ನಾಯಕತ್ವ ಎಂಬುದು ಸುವರ್ಣ ಕೌಶಲ (ಗೋಲ್ಡನ್ ಸ್ಕಿಲ್)ವಾಗಿದೆ. ಆತ್ಮವಿಶ್ವಾಸ, ಪ್ರಗತಿದಾಯಕ ಮನಸ್ಥಿತಿ ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಾಗ ಉದ್ಯೋಗ ಮತ್ತು ವೈಯಕ್ತಿಕ ಜೀವನ ನಿರ್ವಹಣೆ ಸುಲಭವಾಗಲಿದೆ ಎಂದು ಸಮೂಹ ಉದ್ಯಮಗಳಿಗಾಗಿ ಸಾಮೂಹಿಕ ಒಕ್ಕೂಟ (ಗೇಮ್) ಸಂಸ್ಥಾಪಕ ರವಿ ವೆಂಕಟೇಶನ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಕನ್ವೆನ್ಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎನ್‌ಐಟಿಕೆ ಕನೆಕ್ಟ್- ಇಂಜಿನಿಯರಿಂಗ್ ಮತ್ತು ಕೃತಕ ಬುದ್ಧಿಮತ್ತೆ ಎಂಬ ಸಮಾವೇಶದಲ್ಲಿ ಅವರು ಮಾತನಾಡಿದರು.

    ಕೃತಕ ಬುದ್ಧಿಮತ್ತೆಯು ಹೆಚ್ಚು ಬಳಕೆಯಾಗುತ್ತಿರುವ ಕಾರಣ ಮುಂದಿನ ಕೆಲವು ವರ್ಷಗಳಲ್ಲಿ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಸಮರ್ಥವಾಗಿ ಎದುರಿಸಲು ಪ್ರಗತಿದಾಯಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಿದೆ. ಮೂಲಭೂತವಾಗಿ ಹೊಸ ಸಂಗತಿಗಳನ್ನು ಕಲಿಯುವುದನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

    ಇಂದಿನ ಸಂಸ್ಥೆಗಳು ಉದ್ಯೋಗಸ್ಥರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತಿದೆ. ಕೇವಲ ಕಡಿಮೆ ಸಂಖ್ಯೆಯ ಮಂದಿಯನ್ನಷ್ಟೇ ಖಾಯಂ ಉದ್ಯೋಗಸ್ಥರನ್ನಾಗಿ ನೇಮಿಸಿಕೊಳ್ಳುತ್ತಿದೆ. ಹೀಗಾಗಿ, ಜೀವನದಲ್ಲಿ ಎರಿಳಿತಗಳು ಇರುತ್ತವೆ. ಇದೆಲ್ಲವನ್ನೂ ನಿರ್ವಹಣೆ ಮಾಡಲು ವಯಸ್ಸು ಕಾರಣವಾಗುವುದಿಲ್ಲ. ಏಕೆಂದರೆ, ಇಂದಿಗೂ 70- 80ರ ಇಳಿ ವಯಸ್ಸಿನಲ್ಲಿಯೂ ಚುರುಕಾಗಿ ಕೆಲಸ ಮಾಡುವವರನ್ನು ನೋಡಿದ್ದೇವೆಂದರು.

    ಬದಲಾವಣೆ ಮನಸ್ಥಿತಿ ಮುಖ್ಯ:

    ಹೆಚ್ಚಿನ ಜನರಿಗೆ ಉದ್ಯೋಗದ ಸ್ಥಿರತೆ ಇರುವುದಿಲ್ಲ. ಹೊಸ ಆಲೋಚನೆಗಳು ಉದ್ಯೋಗವನ್ನು ಅಚಲವಾಗಿರುವಂತೆ ನೋಡಿಕೊಳ್ಳಲಿದೆ. ಹೊಸ ವಿಚಾರಗಳು ಪ್ರಸ್ತುತವಾಗಿರಬೇಕು. ಅಪಾಯಕಾರಿ ನಿಧಾರಗಳನ್ನು ಕೈಗೊಳ್ಳುವಂತಿರಬೇಕು. ನಿಮ್ಮನ್ನು ನೀವು ಉತ್ತಮಗೊಳಿಸಿಕೊಳ್ಳುವುದು ಮತ್ತು ಬದಲಾವಣೆ ಬಯಸುವ ಗುಣಗಳು ಉತ್ತಮ ವೇದಿಕೆಗಳನ್ನು ಕಲ್ಪಿಸಲಿವೆ ಎಂದರು.

    ಬಹಳ ಬೇಗ ತಂದೆ-ತಾಯಿಯನ್ನು ಕಳೆದುಕೊಂಡಾಗ, ದಿಢೀರ್ ಬೆಳವಣಿಗೆಯಲ್ಲಿ ಉದ್ಯೋಗ ಕಳೆದುಕೊಳ್ಳುವುದು ಮತ್ತು ಹೊಸ ಜವಾಬ್ದಾರಿಗಳನ್ನು ಹೊತ್ತಾಗ ಜೀವನ ತುಂಬಾ ಕಷ್ಟಕರವಾಗಬಹುದು. ಇದನ್ನೆಲ್ಲ ಪ್ರಬಲವಾಗಿ ಎದುರಿಸಬೇಕಾದರೆ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

    ಎನ್‌ಐಟಿಕೆ ಕನೆಕ್ಟ್ ಸಂಚಾಲಕ ಶ್ರೀಕಾಂತ್ ಪ್ರಭು ಮಾತನಾಡಿ, ದೀರ್ಘ ಕಾಲದಲ್ಲಿ ಪ್ರಸ್ತುತ, ಸುಸ್ಥಿರವಾಗಿರುವಂತಹ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ ಎಂದರು.

    ಸಮಾವೇಶದಲ್ಲಿ 50ಕ್ಕೂ ಹೆಚ್ಚಿನ ಪ್ರತಿನಿಧಿಗಳು, 70ಕ್ಕೂ ಹೆಚ್ಚಿನ ಪ್ರಬಂಧ ಮಂಡನೆ ಮಾಡುವವರು ಪಾಲ್ಗೊಂಡಿದ್ದರು,

    ಸಮಾವೇಶವು ಕೆಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳು, ಮುಂದಿನ 5 ವರ್ಷದಲ್ಲಿ ಹೊಸ ಯೂನಿಕಾರ್ನ್, ನವೋದ್ಯಮ ಆರಂಭಿಸಬೇಕು ಎನ್ನುವವರಿಗೆ ಹೆಚ್ಚು ಸಹಕಾರಿಯಾಗಲಿದೆ. ಹೊಸ ಆಲೋಚನೆಗಳನ್ನು ಹಂಚಿಕೊಳ್ಳಲು ಈ ಸವಾವೇಶವು ವೇದಿಕೆಯಾಗಲಿದೆ.
    – ನಿರಂಜನ್ ಮಹಾಬಲಪ್ಪ, ಎನ್‌ಐಟಿಕೆ ಕನೆಕ್ಟ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts