More

    ಸಮಾಜಮುಖಿ ಸೇವೆಗೆ ಬದ್ಧರಾಗಿ ಶ್ರಮಿಸೋಣ

    ಲಕ್ಷ್ಮೇಶ್ವರ: ಸಂಘಟನಾ ಶಕ್ತಿಯಿಂದ ಸಮಾಜಮುಖಿ ಸೇವೆ ಮಾಡಬೇಕೆಂಬ ಧ್ಯೇಯಕ್ಕೆ ಬದ್ಧರಾಗಿ ಎಲ್ಲರೂ ಶಕ್ತಿ ಮೀರಿ ಶ್ರಮಿಸೋಣ ಎಂದು ಇನ್ನರವ್ಹೀಲ್ ಕ್ಲಬ್ ಲಕ್ಷ್ಮೇಶ್ವರ ತಾಲೂಕು ಘಟಕದ ಸಂಸ್ಥಾಪಕ ಅಧ್ಯಕ್ಷೆ ಮಾಲಾದೇವಿ ದಂಧರಗಿ ಹೇಳಿದರು.
    ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇನ್ನರ್‌ವ್ಹೀಲ್ ಕ್ಲಬ್‌ನ ಲಕ್ಷ್ಮೇಶ್ವರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಹಿರಿಯ ಜೀವಿಗಳಿಗೆ ಸನ್ಮಾನ ಮತ್ತು ಬಡ ಮಕ್ಕಳಿಗೆ ನೋಟ್‌ಬುಕ್-ಪೆನ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
    ಸಂಸ್ಥೆಯಿಂದ ಕಳೆದ ಹಲವಾರು ವರ್ಷಗಳಿಂದ ಪರಿಸರ ರಕ್ಷಣೆ, ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಹಿರಿಯರ ಸೇವೆ, ಮಹಿಳಾ ಸಬಲೀಕರಣದಂತಹ ಅನೇಕ ಕಾರ್ಯಕ್ರಮ ಹಾಗೂ ಕೋವಿಡ್ ಸಂದರ್ಭದಲ್ಲಿ ಸಹಾಯಹಸ್ತ ಚಾಚುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಾಡಲು ಸಾಧ್ಯವಿದೆ. ಸಂಸ್ಥೆಯಿಂದ ಮುಂದೆಯೂ ಇನ್ನಷ್ಟು ಉತ್ತಮ ಸಮಾಜಮುಖಿ ಸೇವೆಗಳು ನಡೆಯಲಿ ಎಂದರು.
    ಸುವರ್ಣಬಾಯಿ ಬಹದ್ದೂರ್ ದೇಸಾಯಿ, ರೋಹಿಣಿಬಾಯಿ ಬಹದ್ದೂರ್ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಬಡ ಮಕ್ಕಳಿಗೆ ನೋಟ್-ಬುಕ್ ಪೆನ್ ವಿತರಿಸಲಾಯಿತು. 2023-24ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಕಾವ್ಯಾ ಬಹದ್ದೂರ ದೇಸಾಯಿ, ಕಾರ್ಯದರ್ಶಿಯಾಗಿ ಉಮಾ ಬಿಂಕದಕಟ್ಟಿ, ಖಜಾಂಚಿಯಾಗಿ ರೇಖಾ ವಡಕಣ್ಣವರ, ಐಎಸ್‌ಒ ಆಗಿ ಅಶ್ವಿನಿ ಅಂಕಲಕೋಟಿ ಅಧಿಕಾರ ಸ್ವೀಕರಿಸಿದರು. ಡಾ. ಸುಜಾತ ಸಂಗೂರ, ಮಂಜುಳಾ ಸತ್ಯಪ್ಪನವರ, ಕಾವ್ಯಾ ಪೈ, ಮಂಜುಳಾ ಅಕ್ಕಿ, ರೂಪಾ ನವಲೆ ನೂತನ ಸದಸ್ಯತ್ವ ಪಡೆದರು. ಸುಲೋಚನಾ ಜವಾಯಿ, ನಿರ್ಮಲಾ ಅರಳಿ, ರತ್ನಾ ಕರ್ಕಿ, ನಂದಾ ಧರ್ಮಾಯತ, ಜಯಶ್ರೀ ಮೆಳ್ಳಿಗೇರಿ, ಇಂದುಮತಿ ಜಕ್ಕನಗೌಡ್ರ ಪಾಲ್ಗೊಂಡಿದ್ದರು. ರೇಖಾ ವಡಕಣ್ಣವರ, ಉಮಾ ಬಿಂಕದಕಟ್ಟಿ, ಪ್ರಿಯಾ ಕುಂಬಿ, ಮಂಜುಳಾ ಓದುನವರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts