More

    ಸುಪ್ರೀಂಕೋರ್ಟ್​ನಲ್ಲಿ ವಕೀಲರ ಅವಾಂತರ! ಟಿಶರ್ಟ್​ ಧರಿಸಿ, ಮಲಗಿಕೊಂಡು ವಾದ!

    ನವದೆಹಲಿ: ರಾಷ್ಟ್ರಾದ್ಯಂತ ಕರೊನಾ ಪಿಡುಗು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮತ್ತು ಹೈಕೋರ್ಟ್​ಗಳು ಸೇರಿ ಎಲ್ಲ ಕೋರ್ಟ್​ಗಳಲ್ಲೂ ವರ್ಚುಯಲ್​ ವಿಚಾರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ತುರ್ತು ವಿಚಾರಣೆಯ ಅಗತ್ಯ ಇರುವ ಪ್ರಕರಣಗಳಿಗೆ ಮಾತ್ರವೇ ಇದು ಸೀಮಿತವಾಗಿದೆ.

    ಆದರೆ, ವರ್ಚುಯಲ್​ ವಿಚಾರಣೆಯಲ್ಲಿ ಕೋರ್ಟ್​ನ ಶಿಷ್ಟಾಚಾರ ಮರೆತು ವಕೀಲರು ವಿವಿಧ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

    ಸುಪ್ರೀಂಕೋರ್ಟ್​ನ ವರ್ಚುಯಲ್​ ವಿಚಾರಣೆ ವೇಳೆ ವಕೀಲರೊಬ್ಬರು ಟಿಶರ್ಟ್​ ಧರಿಸಿ, ಮಂಚದ ಮೇಲೆ ಮಲಗಿಕೊಂಡು ವಾದ ಮಂಡಿಸುವ ಮೂಲಕ ನ್ಯಾಯಪೀಠದಿಂದ ತಲೆ ಮೇಲೆ ಮೊಟಕಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನೇಪಾಳದಲ್ಲಿ ಭಾರತೀಯರಿಗಾಗಿ ಹೊಸ ಪೌರತ್ವ ಕಾಯ್ದೆ ಜಾರಿ

    ಹರಿಯಾಣದ ರೇವಾರಿ ಕುಟುಂಬ ನ್ಯಾಯಾಲಯದಲ್ಲಿ ನಡಯುತ್ತಿರುವ ಕೌಟುಂಬಿಕ ಕಲಹ ಕುರಿತ ವಿಚಾರಣೆಯನ್ನು ಬಿಹಾರದ ಜೆಹನಾಬಾದ್​ನ ಸೂಕ್ತ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ಕುರಿತು ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯ ಕುರಿತು ಸುಪ್ರೀಂಕೋರ್ಟ್​ ವರ್ಚುಯಲ್​ ವಿಚಾರಣೆ ನಡೆಸುತ್ತಿತ್ತು.

    ಈ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ವಕೀಲರು ಟಿಶರ್ಟ್​ ಧರಿಸಿ, ತಮ್ಮ ಮನೆಯ ಮಂಚದ ಮೇಲೆ ಆರಾಮವಾಗಿ ಮಲಗಿಕೊಂಡು, ವಾದ ಮಂಡಿಸುತ್ತಿದ್ದದ್ದು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಎಸ್​. ರವೀಂದ್ರ ಭಟ್​ ಅವರ ಗಮನಕ್ಕೆ ಬಂದಿತು. ತಕ್ಷಣವೇ ಅವರು ವಕೀಲರನ್ನು ತರಾಟೆಗೆ ತೆಗೆದುಕೊಂಡರು.

    ತಮ್ಮ ತಪ್ಪನ್ನು ಅರಿತುಕೊಂಡ ವಕೀಲರು ತಕ್ಷಣವೇ ನ್ಯಾಯಮೂರ್ತಿ ಅವರಲ್ಲಿ ಕ್ಷಮೆಯಾಚಿಸಿದರು. ನ್ಯಾಯಮೂರ್ತಿಗಳು ಅದನ್ನು ಅಂಗೀಕರಿಸಿದರು.

    ಇದನ್ನೂ ಓದಿ: ಗಲ್ವಾನ್​ ಘರ್ಷಣೆ ಬಳಿಕ ಎಲ್​ಎಸಿಯಲ್ಲಿ ಭದ್ರತೆ ಹೆಚ್ಚಿಸಿದ ಭಾರತ

    ವರ್ಚುಯಲ್​ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕನಿಷ್ಠ ಕೋರ್ಟ್​ನ ಶಿಷ್ಟಾಚಾರಗಳನ್ನು ಪಾಲಿಸಬೇಕು. ಅಚ್ಚುಕಟ್ಟಾದ ಸಭ್ಯವಾದ ಬಟ್ಟೆ ಧರಿಸಿ, ಸೂಕ್ತ ಹಿನ್ನೆಲೆಯಲ್ಲಿ ನಿಂತು ವಿಚಾರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ನ್ಯಾಯಮೂರ್ತಿ ರವೀಂದ್ರ ಭಟ್​ ವಕೀಲರೆಲ್ಲರಿಗೂ ಜೂ.15ರಂದು ಆದೇಶ ನೀಡಿದರು.

    ನಾವು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಚುಯಲ್​ ವಿಚಾರಣೆಗಳು ಸಾಮಾನ್ಯ ಎಂಬಂತಾಗಿದೆ. ಇಂಥ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕೀಲರು ಕನಿಷ್ಠ ನ್ಯಾಯಾಲಯದ ಶಿಷ್ಟಾಚಾರವನ್ನು ಪಾಲಿಸುವುದಿಲ್ಲ ಎಂದರೆ ಹೇಗೆ ಎಂದು ಇದಕ್ಕೂ ಮುನ್ನ ಅವರು ಬೇಸರ ವ್ಯಕ್ತಪಡಿಸಿದ್ದರು.

    ಇದಕ್ಕೂ ಮುನ್ನ ಕಳೆದ ಏಪ್ರಿಲ್​ನಲ್ಲಿ ರಾಜಸ್ಥಾನ ಹೈಕೋರ್ಟ್​ನಲ್ಲಿ ಜಾಮೀನು ಕೋರಿದ ಅರ್ಜಿಯ ವಿಚಾರಣೆಯ ವೇಳೆ ವಕೀಲರೊಬ್ಬರು ಕೇವಲ ಬನಿಯನ್​ ತೊಟ್ಟು ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಆಗ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಮೂರ್ತಿಗಳು, ಅವರ ಈ ವರ್ತನೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು.

    ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು

    Lq

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts