More

    ಪ್ರತಿಯೊಬ್ಬರೂ ಕಾನೂನು ತಿಳಿದುಕೊಳ್ಳಬೇಕು; ನ್ಯಾಯಾಧೀಶೆ ಲಾಡಖಾನ

    ರಾಣೆಬೆನ್ನೂರ: ಮನುಷ್ಯನಿಗೆ ಹುಟ್ಟಿನಿಂದ ಸಾಯುವರೆಗೂ ಕಾನೂನಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನು ಕುರಿತು ತಿಳಿದುಕೊಳ್ಳಬೇಕು ಎಂದು ಇಲ್ಲಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವೈ.ಎಲ್. ಲಾಡಖಾನ ಹೇಳಿದರು.
    ನಗರದ ಆರ್‌ಟಿಇಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಆರ್‌ಟಿಇಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಮಕ್ಕಳ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಇತ್ತೀಚಿನ ದಿನಗಳಲ್ಲಿ ಭ್ರೂಣ ಹತ್ಯೆ ಸಾಮಾನ್ಯವಾಗಿ ಒಂದು ಪಿಡುಗಾಗಿದ್ದು ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದೆ. ಅದನ್ನು ತಡೆಗಟ್ಟುವ ಸಲುವಾಗಿ ಭ್ರೂಣ ಹತ್ಯೆ ಕಾಯ್ದೆ ಜಾರಿಯಲ್ಲಿದೆ. ಮಗು ಗರ್ಭದಲ್ಲಿದ್ದಾಗ ಆ ಮಗು ಹೆಣ್ಣು ಮಗು ಅಥವಾ ಗಂಡು ಮಗು ಎಂದು ಪರಿಕ್ಷೀಸಿ ಒಂದು ವೇಳೆ ಹೆಣ್ಣು ಮಗುವಾಗಿದ್ದರೆ ಭ್ರೂಣ ಹತ್ಯೆ ಮಾಡುವುದು ಕಾನೂನಿನಡಿ ಅಪರಾಧವಾಗುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನದೆ ಆದ ಇಷ್ಟದ ಧರ್ಮವನ್ನು ಅನುಸರಿಸಲು ಪಾಲಿಸಲು ನಮ್ಮ ಸಂವಿಧಾನವು ಅಧಿಕಾರ ಮತ್ತು ಹಕ್ಕನ್ನು ನೀಡಿದೆ. ಎಲ್ಲರೂ ನೆಲದ ಕಾನೂನು ಗೌರವಿಸಬೇಕು ಮತ್ತು ಪಾಲನೆ ಮಾಡಬೇಕು ಎಂದರು.
    ಹಿರಿಯ ದಿವಾಣಿ ನ್ಯಾಯಾಧೀಶ ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಲಕ್ಷ್ಮಣ ಕೆಂಗೊಂಡ, ಎನ್.ಎಂ. ಡೊಂಬರ, ಎಸ್.ಟಿ. ಸತೀಶ, ಸೀತಾ ಸಾವಕಾರ, ಚಂದ್ರಪ್ಪ ಕರ್ಜಗಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts