More

    ಸಾಹಿತ್ಯ ಎಂದರೆ ಸ್ವ ಅಧ್ಯಯನ, ಭಾರತ್ ೌಂಡೇಶನ್ ವತಿಯಿಂದ ನಡೆದ ಮಂಗಳೂರು ಲಿಟ್ ೆಸ್ಟ್‌ನ ಆರನೇ ಆವೃತ್ತಿಗೆ ಚಾಲನೆ ನೀಡಿ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

    ಮಂಗಳೂರು: ಸಾಹಿತ್ಯ ಎಂದರೆ ಸ್ವ ಅಧ್ಯಯನವಾಗಿದ್ದು, ಇಡೀ ಭಾರತೀಯ ಪರಂಪರೆಯನ್ನು ಅಧ್ಯಯನ ಮಾಡುವುದರ ಜತೆಗೆ ನಮಗೆ ಗೊತ್ತಿಲ್ಲದೇ ನಮ್ಮಲ್ಲಿ ನಾವು ಗುರುತಿಸಿಕೊಳ್ಳುತ್ತಾ ಹೋಗುವುದು ಸ್ವ ಅಧ್ಯಯನವಾಗಿದ್ದು, ಇದು ಬಹಳ ಅಗತ್ಯವಾಗಿದೆ. ಸಾಹಿತ್ಯದ ಅಧ್ಯಯನ ಎನ್ನುವುದು ನಮ್ಮ ಅಧ್ಯಯನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

    ಶುಕ್ರವಾರ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾರತ್ ೌಂಡೇಶನ್ ವತಿಯಿಂದ ಮಿಥಿಕ್ ಸೊಸೈಟಿ ಸಹಭಾಗಿತ್ವದಲ್ಲಿ ಮಂಗಳೂರು ಲಿಟ್ ೆಸ್ಟ್‌ನ ಆರನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದರು.

    ಸಾಹಿತ್ಯದಲ್ಲಿ ಬಳಸುವ ಸೃಜನಶೀಲತೆ, ಸೃಷ್ಟಿಶೀಲತೆಯಲ್ಲಿ ಆದರ್ಶ ಹಾಗೂ ದುರಂತ ಪ್ರಜ್ಞೆ ಎರಡು ಜತೆಯಾಗಿ ಕೂಡಿರುತ್ತದೆ. ರಾಯಾಯಣದಲ್ಲಿ ಪಾತ್ರ ಚಿತ್ರದ ಮೂಲಕವೇ ಕಾವ್ಯ ಹುಟ್ಟಿಕೊಂಡಿತು. ಇಲ್ಲಿ ರಾಮನ ಪಾತ್ರ ಆದರ್ಶವಾಗಿತ್ತು. ವಾಲ್ಮೀಕಿ ನಾರದಾ ಮುನಿಯಿಂದ ಕತೆ ಕೇಳಿ ಅದಕ್ಕೆ ಸೃಜನಶೀಲತೆಯನ್ನು ಸೇರಿಸಿದ ಕಾರಣಕ್ಕೆ ಅದು ವಾಲ್ಮೀಕಿ ರಾಮಾಯಣವಾಗಿ ಮೂಡಿಬಂತು. ಮನುಷ್ಯನ ಪ್ರವೃತ್ತಿ ಕೂಡ ಅದೇ ಅಗಿರುತ್ತದೆ. ನೋಡಿದ್ದು, ಕೇಳಿದ ವಿಚಾರದಲ್ಲಿ ಆತ ಬಹಳ ಪ್ರಭಾವಿತನಾಗಿ ಅದರ ಅನುಕರಣೆಯನ್ನು ಮಾಡಲು ಮುಂದಾಗುತ್ತಾನೆ. ಕಾವ್ಯ ಕಟ್ಟುವ ಉತ್ಸಾಹ ಮತ್ತು ನೋವಿಗೆ ಮಿಡಿಯುವ ಮನಸ್ಸಿನ ಸೂಕ್ಷ್ಮತೆ ಸೇರಿದರೆ ಗೊತ್ತಿಲ್ಲದೇ ಸೃಷ್ಟಿಶೀಲತೆ ಪ್ರಕಟಗೊಳ್ಳುತ್ತದೆ. ಕಟ್ಟುವ ಉತ್ಸಾಹ ಆದರ್ಶ ಜತೆಗೆ ಘೋರತೆಯನ್ನು ಸೃಷ್ಟಿಮಾಡುವಂತೆ ಭಾಷೆ ಕೂಡ ಘೋರತೆಯನ್ನು ಸೃಷ್ಟಿಸುವ ಜತೆಯಲ್ಲಿ ಶಾಂತಿಯನ್ನು ನೆಲೆಸುವ ಕೆಲಸವನ್ನು ಮಾಡಬಲ್ಲದು ಎಂದರು.

    ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ಎಸ್. ರವಿ ಮತ್ತು ವನಿತಾ ಸೇವಾ ಸಮಾಜ ಧಾರವಾಡ ಇದರ ಕಾರ್ಯದರ್ಶಿ ಮಧುರಾ ಹೆಗಡೆ, ಕ್ಯಾ. ಬ್ರಜೇಶ್ ಚೌಟ ಉಪಸ್ಥಿತರಿದ್ದರು. ಸಭಾ ಕಾರ‌್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ‌್ಯಕ್ರಮಗಳು ನಡೆಯಿತು. ಎರಡು ದಿನಗಳ ಕಾಲ ಲಿಟ್ ೆಸ್ಟ್ ಮುಂದುವರಿಯಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

    ಭಾರತ್ ೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಸಂಘಟಕ ಅಭಿಷೇಕ್ ಶೆಟ್ಟಿ ಹಾಗೂ ನಿಧಿ ಹೆಗ್ಡೆ ನಿರೂಪಿಸಿದರು.

    —————–

    ನಮ್ಮನ್ನು ಆಳುವುದು ಯಾವುದೇ ಸರ್ಕಾರಗಳು ಅಲ್ಲ. ಬದಲಾಗಿ ನಮ್ಮ ಅಲೋಚನೆಗಳು ಭಾಷೆ ಜತೆಗೆ ಮನಸ್ಸನ್ನು ಆಳುತ್ತದೆ. ಅವುಗಳು ಘೋರತೆ ಸೃಷ್ಟಿ ಮಾಡಬಲ್ಲದು ಎಂದಾದರೆ ಅದರ ಮೂಲಕ ಶಾಂತಿಯನ್ನು ಕೂಡ ಸೃಷ್ಟಿ ಮಾಡಲು ಸಾಧ್ಯ. ಸಾಹಿತ್ಯದಿಂದ ಸಂವೃದ್ದ ಜ್ಞಾನ ಪಡೆಯಲು ಸಾಧ್ಯ.

    ಲಕ್ಷ್ಮೀಶ ತೋಳ್ಪಾಡಿ,

    ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts