More

    ಗಾರ್ಡಿಯನ್ ಆಫ್ ಹಾರ್ಟ್ 2.0 ಅಭಿಯಾನಕ್ಕೆ ಚಾಲನೆ

    ಬೆಂಗಳೂರು: ಮಣಿಪಾಲ್ ಆಸ್ಪತ್ರೆ ಮತ್ತು ನಗರ ಸಂಚಾರ ಪೊಲೀಸ್‌ನ ಸಹಕಾರದೊಂದಿಗೆ ಹೃದಯ ಹಾಗೂ ಶ್ವಾಸ ಕೋಶಕ್ಕೆ ಸಂಬಂಧಿಸಿದ (ಸಿಪಿಆರ್) ತರಬೇತಿ ನೀಡುವುದರ ಮೂಲಕ ‘ಗಾರ್ಡಿಯನ್ ಆಫ್ ಹಾರ್ಟ್ 2.೦’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


    ನಗರ ಸಂಚಾರಿ ಪೊಲೀಸ್ ಆಯುಕ್ತರ ಕಚೇರಿಯ ಸೋಮವಾರ ನಡೆದ ಸಂಚಾರಿ ಪೊಲೀಸರಿಗೆ ಹಮ್ಮಿಕೊಂಡಿದ್ದ ಹೃದಯ ಹಾಗೂ ಶ್ವಾಸ ಕೋಶಕ್ಕೆ ಸಂಬಂಧಿಸಿದ (ಸಿಪಿಆರ್) ತರಬೇತಿ ಕಾರ್ಯಕ್ರಮದಲ್ಲಿ ನೂತನ ಈ ಕ್ಯೂಆರ್ ಕೂಡ್‌ಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಎಂ.ಎನ್.ಅನುಚೇತ್ ಚಾಲನೆ ನೀಡಿದರು.


    ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ವಾಹನ ಸವಾರರು ಹಾಗೂ ಪ್ರಯಾಣಿಕರು ಹೈರಾಣರಾಗಿದ್ದು ತುರ್ತು ಸಂದರ್ಭದಲ್ಲಿ ಜೀವರಕ್ಷಣೆ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ನಗರ ಪ್ರಮುಖ ವೃತ್ತಗಳಲ್ಲಿ ಗೋಲ್ಡನ್ ಅವರ್ ಕ್ಯೂಆರ್ ಕೂಡ್ ಅಳವಡಿಸಲಾಗಿದೆ. ಕೆಲಸದ ಒತ್ತಡ ಹಾಗೂ ಜಂಜಾಟದಲ್ಲಿ ನಗರ ನಿವಾಸಿಗಳಿದ್ದು ಬಹುತೇಕ ಸಮಯ ನಗರದ ರಸ್ತೆಗಳಲ್ಲಿ ಕಾಲ ಕಳೆಯುವಂತಾಗಿದೆ. ಈ ವೇಳೆ ಪ್ರತಿಯೊಬ್ಬರಿಗೂ ಆತುರವಿರುತ್ತದೆ ಇಂತಹ ಸಂದರ್ಭದಲ್ಲಿ ಹೃದಯ ಸಮಸ್ಯೆ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ಶೀಘ್ರ ಆಸ್ಪತ್ರೆ ತಲುಪುವುದು ಸವಾಲಾಗಿದ್ದು , ಈ ನಿಟ್ಟಿನಲ್ಲಿ ನಗರದ ೪೦ ಕಡೆ ಹೃದಯಾಕಾರವಾಗಿ ಎಸ್‌ಒಎಸ್ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಸ್ಟಿಕರ್ ಅಳವಡಿಸಲಾಗಿದೆ. ಇಲ್ಲಿ ತಮ್ಮ ಮೊಬೈಲ್ಗಳ ಮೂಲಕ ಕೂಡ್ ಅನ್ನು ಸ್ಕ್ಯಾನ್ ಮಾಡಿದರೆ ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ಬರಲಿದೆ ಇದರಿಂದ ಅಮೂಲ್ಯ ಜೀವ ರಕ್ಷಣೆಗೆ ಸಹಾಯವಾಗಲಿದೆ ಎಂದು ಅನುಚೇತ್ ಹೇಳಿದರು.


    ಮಣಿಪಾಲ್ ಆಸ್ಪತ್ರೆಯ ಸಹಯೋಹದೊಂದಿಗೆ ಸಂಚಾರಿ ಪೊಲೀಸರು ಈ ನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ತುರ್ತು ಸಂದರ್ಭದಲ್ಲಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರ ಪೊಲೀಸರು ಪಾಲೀಸಬೇಕಾದ ಮುಂಜಾಗೃತ ಕ್ರಮಗಳ ಕುರಿತು ವೈದ್ಯರು ತರಬೇತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts