More

    ಮುಂಬೈನ ಎರಡು ತಾಜ್​ ಹೋಟೆಲ್​ಗಳ ಮೇಲೆ ದಾಳಿ ನಡೆಸುವುದಾಗಿ ಉಗ್ರರ ಬೆದರಿಕೆ; ಸ್ಥಳದಲ್ಲಿ ಕಟ್ಟೆಚ್ಚರ

    ಮುಂಬೈ: ಕೊಲಾಬಾದಲ್ಲಿರುವ ತಾಜ್​ ಮಹಲ್​ ಪ್ಯಾಲೇಸ್​ ಹೊಟೆಲ್ ಹಾಗೂ ಬಾಂದ್ರಾದಲ್ಲಿರುವ ತಾಜ್​ ಲ್ಯಾಂಡ್ಸ್​ ಎಂಡ್​ ಹೋಟೆಲ್​ಗೆ ಸೋಮವಾರ ತಡರಾತ್ರಿ ಉಗ್ರರಿಂದ ಬೆದರಿಕೆ ಕರೆ ಬಂದಿದೆ.

    ಕರೆ ಮಾಡಿದವನು ತನ್ನನ್ನು ತಾನು ಪಾಕಿಸ್ತಾನದ ಲಷ್ಕರ್​ ಎ ತೈಬಾ(ಎಲ್​ಇಟಿ) ಉಗ್ರ ಸಂಘಟನೆಗೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ. ಎರಡೂ ಹೋಟೆಲ್​​ಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಸಿದ್ದಾನೆ. ಪಾಕ್​ನಿಂದ ಉಗ್ರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹೋಟೆಲ್​ಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಮೊದಲು ಮಧ್ಯರಾತ್ರಿ 12.30ಯಷ್ಟರಲ್ಲಿ ತಾಜ್​ ಮಹಲ್​ ಪ್ಯಾಲೇಸ್​​ಗೆ ಕರೆ ಬಂದಿದೆ. ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿ ಅದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದ ವ್ಯಕ್ತಿ ತಾನು ಎಲ್​ಇಟಿಗೆ ಸೇರಿದ ಉಗ್ರ, ತಾಜ್ ಹೊಟೆಲ್​ನ್ನು ಸರ್ವನಾಶ ಮಾಡುತ್ತೇವೆ. 2008ರಲ್ಲಿ ನಡೆಸಿದ್ದಂತಹ ದಾಳಿಯನ್ನು ಇನ್ನೊಮ್ಮೆ ನಡೆಸುತ್ತೇವೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಚೀನಾ ಕಂಪನಿಗಳ ವಿರುದ್ಧ ತಿರುಗಿಬಿದ್ದ ಪಾಕ್​ ಮುಸ್ಲಿಂ ಧರ್ಮಗುರು: ಕಾರಣ ‘ನಮಾಜ್’

    ಅದಾದ ಬಳಿಕ ಎರಡನೇ ಕರೆಯನ್ನು ಬಾಂದ್ರಾದಲ್ಲರಿಉವ ತಾಜ್​ ಲ್ಯಾಂಡ್​ ಎಂಡ್​ ಹೋಟೆಲ್​ಗೆ ಮಾಡಿ, ನಾನು ಪಾಕಿಸ್ತಾನದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು, ದಾಳಿಯ ಬೆದರಿಕೆ ಹಾಕಿದ್ದಾನೆ. ಎರಡೂ ಕರೆಗಳೂ ಒಂದೇ ನಂಬರ್​​ನಿಂದ ಬಂದಿವೆ.
    ಸದ್ಯ ಕರೊನಾ ವೈರಸ್​ನಿಂದಾಗಿ ಎರಡೂ ಹೋಟೆಲ್​ಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಮುಂಬೈ ಪೊಲೀಸರು ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದಾರೆ.

    ಕರೆ ಬಂದ ನಂಬರ್​ ಬಗ್ಗೆ ಸೈಬರ್​ ತನಿಖಾಧಿಕಾರಿಗೂ ಹೆಚ್ಚಿನ ಪರಿಶೀಲನೆ ಮಾಡುತ್ತಿದ್ದಾರೆ. ಕರಾಚಿಯಲ್ಲಿ ಉಗ್ರ ದಾಳಿ ನಡೆದ ದಿನ ರಾತ್ರಿಯೇ ಮುಂಬೈನ ಹೋಟೆಲ್​ಗಳಿಗೆ ಉಗ್ರ ದಾಳಿಯ ಬೆದರಿಕೆ ಬಂದಿದೆ. (ಏಜೆನ್ಸೀಸ್​)

    ಮಂಗಳವಾರ ಸಂಜೆ 4 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts