More

    ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಸೂಚನೆ

    ಕಾನಹೊಸಹಳ್ಳಿ: ಕ್ಯಾಸನಕೆರೆ ಗ್ರಾಮದಲ್ಲಿ ನಾಲ್ಕು ದಿನಗಳಿಂದ 10ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮತ್ತು ಬಾಲಕಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
    ಬಳಿಕ ಮಾತನಾಡಿ, ಇನ್ನು ಮುಂದೆ ಸಮಸ್ಯೆ ತೀವ್ರ ಮತ್ತು ಉಲ್ಬಣವಾಗದಂತೆ ಕಾಳಜಿವಹಿಸಬೇಕು ಹಾಗೂ ಗ್ರಾಮದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
    ನಂತರ ಮೃತ ಬಾಲಕಿ ಬಿಂದು ಮನೆಗೆ ಭೇಟಿ ನೀಡಿ ತಂದೆ ಕಲ್ಲಹಳ್ಳಿ ಅಜ್ಜಪ್ಪನಿಗೆ ಧೈರ್ಯ ತುಂಬಿದರು. ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಕುಡಿವ ನೀರು ಸರಬರಾಜು ವ್ಯವಸ್ಥೆ ಹಾಗೂ ಅಂಗನವಾಡಿ ಕೇಂದ್ರ ಮತ್ತು ವಿವಿಧ ಶಾಲೆಗಳ ಪರಿಸರವನ್ನು ವೀಕ್ಷಿಸಿದರು. ಅಲ್ಲದೆ, ಗ್ರಾಮದಲ್ಲಿ ಮತ್ತೊಮ್ಮೆ ಸ್ವಚ್ಛತೆ ಕೈಗೊಳ್ಳುವಂತೆ ಚೌಡಾಪುರ ಗ್ರಾಪಂ ಪಿಡಿಒ ಎಂ.ಪ್ರಶಾಂತ್‌ಗೆ ಸೂಚಿಸಿದರು.
    ಕ್ಯಾಸನಕೆರೆ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ನಿಯಂತ್ರಣದ ಮಾಹಿತಿ ಪಡೆದರು. ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಸಿಡಿಪಿಒ ನಾಗನಗೌಡ, ಕುಡಿವ ನೀರು ಇಲಾಖೆ ಎಇಇ ಮರಿಸ್ವಾಮಿ, ಗ್ರಾಪಂ ಅಧ್ಯಕ್ಷ, ಸದಸ್ಯರು ಇದ್ದರು.
    ಗೊಂದಲ: ಕಲುಷಿತ ನೀರು ಸರಬರಾಜು ಆಗಿ ಆ ನೀರು ಸೇವಿಸಿದ್ದರಿಂದ ಪರಿಸ್ಥಿತಿ ಹೀಗಾಗಿ ಎನ್ನುವುದು ಗ್ರಾಮಸ್ಥರು ಹೇಳುತ್ತಾರಾದರೂ ಬಾಲಕಿ ಬಿಂದು ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಅಲ್ಲದೆ, ಕುಡಿವ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು ನಂತರ ಖಚಿತ ಮಾಹಿತಿ ತಿಳಿಯಲಿದೆ ಎನ್ನುತ್ತಾರೆ ಅಧಿಕಾರಿಗಳು.

    ಕ್ಯಾಸನಕೆರೆ ಗ್ರಾಮದಲ್ಲಿ ಗ್ರಾಪಂಯಿಂದ ಸ್ವಚ್ಛತೆ ಕಾಪಾಡಿ, ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕಿಸಲಾಗಿದೆ. ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದು, ವಾಂತಿ, ಭೇದಿಯ ಪ್ರಕರಣ ಹತೋಟಿಯಲ್ಲಿದೆ.
    ಡಾ.ಎಸ್.ಪಿ.ಪ್ರದೀಪ್, ತಾಲೂಕು ವೈದ್ಯಾಧಿಕಾರಿ, ಕೂಡ್ಲಿಗಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts