More

    ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಲಾರಿ ಪಲ್ಟಿ

    ಹುಬ್ಬಳ್ಳಿ: ಟೂತ್ ಪೇಸ್ಟ್ ಬಾಕ್ಸ್​ಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಇಲ್ಲಿನ ಚನ್ನಮ್ಮ ವೃತ್ತದ ಕಾಮತ ಹೋಟೆಲ್ ಬಳಿ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.

    ಹರ್ಯಾಣ ಮೂಲದ ಚಾಲಕ ಸುಮೋನ್ ಇಲಿಯಾಸ್ ದೆಹಲಿಯಿಂದ ಕೋಲ್ಗೇಟ್ ಬಾಕ್ಸ್​ಗಳನ್ನು ತುಂಬಿಕೊಂಡು ಬಂದಿದ್ದ. ಬೆಳಗ್ಗೆ 4 ಗಂಟೆ ಸುಮಾರು ಇಲ್ಲಿನ ಎಪಿಎಂಸಿ ಆವರಣದ ಕಡೆಗೆ ಹೊರಟಿದ್ದ. ಚನ್ನಮ್ಮ ವೃತ್ತದ ಬಳಿ ಬಲಕ್ಕೆ ತಿರುಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಉತ್ತರ ಸಂಚಾರ ಠಾಣೆ ಪೊಲೀಸರು ಎರಡು ಕ್ರೇನ್​ಗಳ ಮೂಲಕ ಲಾರಿ ಮೇಲಕ್ಕೆ ಎತ್ತಿದರು. ಲಾರಿಯ ಕೆಲಭಾಗ ಹಾನಿಯಾಗಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ಥಳದಲ್ಲೇ ಇಬ್ಬರ ಸಾವು, ಇಬ್ಬರಿಗೆ ಗಾಯ

    ಕಲಘಟಗಿ: ಲಾರಿಯೊಂದಕ್ಕೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಬಾನಗಿತ್ತಿ ಗುಡಿಹಾಳ ಗ್ರಾಮದ ಸಮೀಪ ಕಲಘಟಗಿ-ಧಾರವಾಡ ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ.

    ತಾಲೂಕಿನ ಬೋಗೇನಾಗರಕೊಪ್ಪ ಗ್ರಾಮದ ಕೂಲಿಕಾರ್ವಿುಕರಾದ ಮೌಲಾಸಾಬ್ ಇಮಾಮ್ಾಬ್ ದೊಡಮನಿ (50), ಕೈರುಸಾಬ್ ಫಕ್ರುಸಾಬ್ ಕುಂಕೂರ (48) ಮೃತಪಟ್ಟವರು. ಇದೇ ಗ್ರಾಮದ ಸಾದಿಕ್ ಮಾಬುಸಾಬ್ ಅಂಕಲಿ (20) ಅವರಿಗೆ ಸ್ವಲ್ಪ ಪೆಟ್ಟಾಗಿದೆ. ಅಪಘಾತಪಡಿಸಿದ ಲಾರಿ ಚಾಲಕ ಅಶ್ಪಾಕಲಿ ಲಾಡ್​ಸಾಬ್ ಕುಸುಗಲ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಾಲ್ವರೂ ಹಿಂಬದಿಯಿಂದ ಅಪಘಾತಪಡಿಸಿದ ಲಾರಿಯಲ್ಲೇ ಪ್ರಯಾಣಿಸುತ್ತಿದ್ದರು. ಇಟ್ಟಿಗೆಗಳನ್ನು ಹೇರಿಕೊಂಡು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ತೆರಳುತ್ತಿದ್ದ ಲಾರಿಯು ಮುಂದೆ ಹೋಗುತ್ತಿದ್ದ ಗೂಡ್ಸ್ ಟಿಪ್ಪರ್​ಗೆ ಡಿಕ್ಕಿ ಹೊಡೆದಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ವಿಜಯ ಬಿರಾದಾರ ತನಿಖೆ ಕೈಗೊಂಡಿದ್ದಾರೆ.

    ಮಾಳಾಪುರದಲ್ಲಿ ಗೋಡೌನ್​ಗೆ ಬೆಂಕಿ

    ಧಾರವಾಡ: ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ಕೋಲ್ಡ್ ಸ್ಟೋರೇಜ್ ಗೋಡೌನ್ ಸುಟ್ಟು ಭಸ್ಮವಾದ ಘಟನೆ ನಗರದ ಮಾಳಾಪುರದಲ್ಲಿ ಗುರುವಾರ ಸಂಭವಿಸಿದೆ. ಇಲ್ಲಿನ ಮಾಳಾಪುರದಲ್ಲಿನ ಶಿವಾಂಗ್ ಎಂಟರ್​ಪ್ರೖೆಸಸ್​ನಲ್ಲಿ ಘಟನೆ ನಡೆದಿದೆ. ಕಿಶೋರಕುಮಾರ ಪಾಟೀಲ ಎಂಬುವವರಿಗೆ ಸೇರಿದ ಈ ಗೋಡೌನ್​ನಲ್ಲಿ ಐಸ್ಕ್ರೀಂ ಶೇಖರಣೆ ಮಾಡಲಾಗುತ್ತಿತ್ತು. ಗುರುವಾರ ನಸುಕಿನಜಾವ ವಿದ್ಯುತ್ ಸ್ಪರ್ಷದಿಂದ ಹೊತ್ತಿಕೊಂಡ ಬೆಂಕಿ ಇಡೀ ಗೋಡೌನ್​ಗೆ ಆವರಿಸಿದೆ. ಘಟನೆಯಲ್ಲಿ ಕಂಪ್ಯೂಟರ್, ಲ್ಯಾಪ್​ಟಾಪ್, ದ್ವಿಚಕ್ರವಾಹನ, ಇತರ ವಸ್ತುಗಳು ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಕೋಲ್ಡ್ ಸ್ಟೋರೇಜ್ ಗೋಡೌನ್ ಇದ್ದ ಕಾರಣಕ್ಕೆ ಬೆಂಕಿ ನಂದಿಸಲು ಸಿಬ್ಬಂದಿ ಕೆಲ ಹೊತ್ತು ತೊಂದರೆ ಅನುಭವಿಸುವಂತಾಗಿತ್ತು ಎಂದು ಅಗ್ನಿ ಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts