More

    ಸಂಪಾಜೆ-ಮಡಿಕೇರಿ ಹೆದ್ದಾರಿ ಕುಸಿಯುವ ಭೀತಿ, ಸರಕು ಸಾಗಣೆ ವಾಹನಗಳು ವಾಪಸ್

    ಸುಳ್ಯ: ಸಂಪಾಜೆ-ಮಡಿಕೇರಿ ನಡುವಣ ರಾಜ್ಯ ಹೆದ್ದಾರಿಯ ಕೆಲವೆಡೆ ಕುಸಿಯುವ ಭೀತಿ ಎದುರಾಗಿದ್ದು, ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸರಕು ಸಾಗಾಟ ವಾಹನಗಳನ್ನು ಸಂಪಾಜೆ ಗೇಟ್‌ನಿಂದ ಮರಳಿ ಮಂಗಳೂರಿನತ್ತ ಕಳುಹಿಸಲಾಗುತ್ತಿದೆ.

    ಕೊಡು ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಸರಕು ಸಾಗಾಟದ ಲಾರಿ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯ ಕೆಲವು ಕಡೆ ತೀವ್ರ ಮಳೆಯಿಂದಾಗಿ ರಸ್ತೆ ಕೆಸರು ತುಂಬಿ ಕುಸಿಯುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಸಲುವಾಗಿ ಸರಕು ಸಾಗಾಣಿಕೆ ಘನ ವಾಹನಗಳನ್ನು ಸಂಪಾಜೆ ಗೇಟ್‌ನಲ್ಲಿ ಅಧಿಕಾರಿಗಳು ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ನೂರಾರು ಲಾರಿಗಳು ಮತ್ತೆ ಮಂಗಳೂರು ಕಡೆಗೆ ಮರಳುತ್ತಿದ್ದು ಲಾರಿ ಚಾಲಕರಿಗೆ ಸಂಕಷ್ಟ ಉಂಟಾಗಿದೆ.

    ಶಿರಾಡಿ ಮತ್ತು ಚಾರ್ಮಡಿ ರಸ್ತೆಯಲ್ಲಿಯೂ ಪ್ರಯಾಣ ಕಷ್ಟವಾಗಿದ್ದು ಈ ರಸ್ತೆಯ ನಿರ್ಬಂಧದಿಂದ ಸರಕು ಸಾಗಾಟದ ವಾಹನಗಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು ವಾಹನ ಬಿಡದಿದ್ದರೆ ಮಂಗಳೂರಿನಲ್ಲಿಯೇ ಮಾಹಿತಿ ಕೊಡಬೇಕು. ನಾವು ನೂರು ಕಿ.ಮೀ.ಬಂದ ನಂತರ ಹಿಂದಕ್ಕೆ ಕಳುಹಿಸಿದರೆ ಹೇಗೆ? ಎಂದವರು ಪ್ರಶ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts