More

    ಪರಿಶೀಲನೆ ಸಂದರ್ಭ ಗುಡ್ಡ ಕುಸಿತ: ಅಧಿಕಾರಿಗಳು ಪಾರು

    ಗುರುಪುರ: ಮಠದಬೈಲು ಎಂಬಲ್ಲಿ ಗುಡ್ಡದ ಮೇಲಿನ ಭಾಗದಲ್ಲಿ ರಸ್ತೆ ಅಂಚಿನಲ್ಲಿರುವ ಮನೆಗೆ ನಿರ್ಮಿಸಲಾಗಿದ್ದ ತಡೆಗೋಡೆ ಕಳೆದ ವಾರದಿಂದ ಕುಸಿಯುತ್ತಿದ್ದು, ಮಣ್ಣಿನ ಸಹಿತ ತಡೆಗೋಡೆ ಕಲ್ಲು ರಸ್ತೆಗೆ ಬಿದ್ದು ಸಂಚಾರಕ್ಕೆ ತಡೆಯಾಗಿತ್ತು. ಶನಿವಾರ ಅಧಿಕಾರಿಗಳು ಮತ್ತು ಗುರುಪುರ ಗ್ರಾಪಂ ಸದಸ್ಯರ ತಂಡ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮಣ್ಣು, ಕಲ್ಲು ಕುಸಿದು ರಸ್ತೆಗೆ ಬಿದ್ದಿದೆ. ತಕ್ಷಣ ಎಲ್ಲರೂ ಓಡಿ ಪಾರಾಗಿದ್ದು, ಅನಾಹುತ ತಪ್ಪಿದೆ.

    ಮನೆಯ ಮುಂದಿರುವ ಮೂರು ತೆಂಗಿನ ಮರ ಮತ್ತು ಒಂದು ಹಲಸಿನ ಮರ ರಸ್ತೆಯತ್ತ ವಾಲಿದೆ. ಇಲ್ಲಿ ದೊಡ್ಡ ಪ್ರಮಾಣದ ಅಪಾಯ ಸಂಭವಿಸುವ ಸಾಧ್ಯತೆ ಗೋಚರಿಸುತ್ತಿದೆ. ಉಪತಹಸೀಲ್ದಾರ್ ಶಿವಪ್ರಸಾದ್ ಮತ್ತು ಕಂದಾಯ ನಿರೀಕ್ಷಕ ನವನೀತ್ ಮಾಳವ, ಪಿಡಿಒ ಅಬೂಬಕ್ಕರ್ ಹಾಗೂ ಪಂಚಾಯಿತಿ ಸದಸ್ಯರಾದ ಸಚಿನ್ ಅಡಪ, ರಾಜೇಶ್ ಸುವರ್ಣ, ಬಿಜೆಪಿ ಮುಖಂಡ ಶ್ರೀಕರ ವಿ.ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ ತಂಡದಲ್ಲಿದ್ದರು. ಬಜ್ಪೆ ಪೊಲೀಸರು ಜತೆಯಲ್ಲಿದ್ದರು. ಗುಡ್ಡದ ಮೇಲೆ ಉದ್ಯಮಿಗೆ ಸೇರಿದ ಮನೆ ಇದ್ದು, ಮನೆಯೂ ಅಪಾಯದಂಚಿನಲ್ಲಿದೆ. ಅಪಾಯಕಾರಿ ಮರಗಳನ್ನು ಕಡಿಯುವಂತೆ ಕಂದಾಯ ಅಧಿಕಾರಿಗಳು ಮನೆ ಮಾಲೀಕರಿಗೆ ಸೂಚಿಸಿದರು.

    ರಸ್ತೆ ಗುರುಪುರ ಬಂಡಸಾಲೆಯಾಗಿ ಗುರುಪುರ ಪಂಚಾಯಿತಿ ಮೂಲಕ ರೋಸಾ ಮಿಸ್ತಿಕಾ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮುಖ್ಯ ಒಳರಸ್ತೆಯಾಗಿದ್ದು, ಗುಡ್ಡ ಕುಸಿತದ ಸಾಧ್ಯತೆ ಇರುವ ಕಾರಣ ವಾಹನ ಸಂಚಾರ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪತಹಸೀಲ್ದಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts