More

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ದಾವಣಗೆರೆ: ಹೇ.. ಇದಿಷ್ಟು ನನ್ನದು, ಈ ಜಾಗ ನನ್ನದು, ಇದು ನನಗೆ ಸೇರಿದ್ದು, ನಾನು ಮೊದಲು ಬಂದದ್ದು ಹಾಗಾಗಿ ಇದು ನನಗೇ ಸೇರಬೇಕು… ಎಂಬ ಸದ್ದು-ಗದ್ದಲ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ಭಾನುವಾರ ಜೋರಾಗಿಯೇ ಇತ್ತು.

    ಪುಕ್ಕಟ್ಟೆ ಜಾಗ ಸಿಗುತ್ತೆ ಅಂತ ಓಡೋಡಿ ಬಂದ ಸಾವಿರಾರು ಜನ, ಈ ಜಾಗ ನಂದು ಅಂತ ಸಲಾಕಿ-ಗುದ್ದಲಿ ತಂದು ಗೂಟ ನೆಡುತ್ತಿದ್ದರು. ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಿಕೊಳ್ಳುತ್ತಿದ್ದರು. ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂಬರ್ 91 ಮತ್ತು ಲಕ್ಷ್ಮೀಸಾಗರದ ಸರ್ವೇ ನಂಬರ್ 15ರಲ್ಲಿ ಒಟ್ಟು 150 ಎಕರೆ ಜಮೀನು ಫ್ರೀಯಾಗಿದೆ. ಯಾರು ಬೇಕಿದ್ದರೂ ಮನೆ ಕಟ್ಟಿಕೊಳ್ಳಬಹುದು ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ನಾ ಮುಂದು-ತಾ ಮುಂದು ಎಂಬಂತೆ ಜನಸಾಗರವೂ ಅಲ್ಲಿ ಬೀಡು ಬಿಟ್ಟಿತ್ತು.

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ150 ಎಕರೆ ಜಮೀನು ಫ್ರೀಯಾಗಿದೆ. ಅದರಲ್ಲಿ ಮನೆ ಕಟ್ಟಿಕೊಳ್ಳಬಹುದೆಂದು ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮತ್ತು ಪುರಸಭೆ ಸದಸ್ಯರು ಹೇಳಿದ್ದಾರೆ ಎಂಬ ವದಂತಿಯನ್ನು ಯಾರೋ ಕಿಡಿಗೇಡಿಗಳು ಹಬ್ಬಿಸಿದ್ದರು. ಸುಳ್ಳು ಸುದ್ದಿಯನ್ನ ನಂಬಿದ ಜನರು ಖಾಲಿ ಜಾಗದಲ್ಲಿ ಮನೆ ಕಟ್ಟಲು ಮುಂದಾಗಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ‌ ಸಿಬ್ಬಂದಿ, ಇದೆಲ್ಲವೂ ಸುಳ್ಳು ಎಂದು ಜನರನ್ನು ವಾಪಸ್​ ಕಳುಹಿಸಿದರು. ಪುಕ್ಕಟ್ಟೆಯಾಗಿ ಜಾಗ ಸಿಗಲಿದೆ ಎಂಬ ಖುಷಿಯಲ್ಲಿ ಬಂದ ಜನತೆ ಗೊಣಗಾಡುತ್ತ ಹೋದರು.

    ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

    ತಾಯಿ ಇಲ್ಲದ ತಬ್ಬಲಿ ಮೇಲೆ 30ಕ್ಕೂ ಹೆಚ್ಚು ಕಾಮುಕರ ಅಟ್ಟಹಾಸ! ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts