More

    ರಾಜ್ಯೋತ್ಸವದಲ್ಲಿ ಸ್ವಯಂಸೇವಕರನ್ನೂ ಗುರುತಿಸಿ: ಶಾಸಕ ಲಾಲಾಜಿ ಆರ್.ಮೆಂಡನ್

    ಪಡುಬಿದ್ರಿ: ಪ್ರಾಕೃತಿಕ ವಿಕೋಪ ಸಂದರ್ಭ ಜೀವ ಹಾನಿ, ಸೊತ್ತು ಹಾನಿ ತಡೆಯುವಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದ ಸಂಘ, ಸಂಸ್ಥೆ ಹಾಗೂ ಪ್ರತಿ ಗ್ರಾಮದ ಸ್ವಯಂ ಸೇವಕರೋರ್ವರನ್ನು ತಾಲೂಕು ಮಟ್ಟದ ರಾಜ್ಯೋತ್ಸವದಂದು ಗುರುತಿಸಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಸೂಚಿಸಿದರು.
    ಕಾಪು ಪುರಸಭಾ ಸಭಾಂಗಣದಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪೂರ್ವಭಾವಿಯಾಗಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಗುರುವಾರ ಆಯೋಜಿಸಿದ ಸಮಾಲೋಚನೆ ಮತ್ತು ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

    ಕೋವಿಡ್ 19 ಕಾರಣದಿಂದ ಸರ್ಕಾರ ಸೂಚಿಸಿರುವ ನಿಯಮಾವಳಿಗಳನ್ನು ಪಾಲಿಸಿ ಸರಳವಾಗಿ ರಾಜ್ಯೋತ್ಸವ ಆಚರಿಸಬೇಕಿದೆ. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

    ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ಮಾತನಾಡಿ, ಕರೊನಾ ಕಾರಣದಿಂದಾಗಿ ಈ ಬಾರಿ ಶಾಲಾ-ಕಾಲೇಜುಗಳ ಪ್ರಾರಂಭದ ದಿನಾಂಕ ಇನ್ನೂ ಅನಿಶ್ಚಿತತೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ – ಕಾಲೇಜುಗಳ ಶಿಕ್ಷಕರೂ ಸೇರಿದಂತೆ ನೌಕರರು ಕಡ್ಡಾಯವಾಗಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿಕ್ಷಕರು ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಶಾಲಾ – ಕಾಲೇಜುಗಳ ಸಿಬ್ಬಂದಿ ಬರದಿದ್ದಲ್ಲಿ ಅಂಥವರ ವಿರುದ್ಧ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದರು.
    ಕಾಪು ಎಸ್‌ಐ ರಾಜಶೇಖರ ಬಿ. ಸಾಗನೂರು, ಕ್ರೈಂ ಎಸ್‌ಐ ಐ.ಆರ್. ಗಡ್ಡೇಕರ್, ಕಾಪು ತಾಲೂಕು ಉಪತಹಸೀಲ್ದಾರ್ ಚಂದ್ರಹಾಸ ಭಂಡಾರಿ, ತಾಪಂ ಪ್ರಭಾರ ಅಧಿಕಾರಿ ರಾಜೇಶ್ ಶೆಣೈ, ಕಂದಾಯ ಕಂದಾಯ ಅಧಿಕಾರಿಗಳು, ಶಾಲಾ ಮುಖ್ಯಸ್ಥರು ಹಾಗೂ ಸರ್ಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಸ್ವಾಗತಿಸಿದರು, ಉಪನ್ಯಾಸಕ ನಾಗರಾಜ್ ಜಿ.ಎಸ್. ವಂದಿಸಿದರು. ಗ್ರಾಮಲೆಕ್ಕಿಗ ಶ್ರೀಕಾಂತ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts