More

    ಲಕ್ಷದೀಪೋತ್ಸವ ಕಾರ್ಯಕ್ರಮ 18ರಿಂದ

    ಭಟ್ಕಳ: ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆಯ ಪ್ರಯುಕ್ತ ಶ್ರೀ ಕುದುರೆಬೀರಪ್ಪ ಹಾಗೂ ಶ್ರೀ ಮುಖ್ಯಪ್ರಾಣ ಹನುಮಂತ ದೇವಸ್ಥಾನದಲ್ಲಿ ಜ.18 ರಿಂದ 22ರವರೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಈ ಕುರಿತು ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಅನಂತ ನಾಯ್ಕ ಮತ್ತು ಕೃಷ್ಣ ನಾಯ್ಕ ಮಾಹಿತಿ ನೀಡಿದರು.

    ಕೆಳದಿ ರಾಜ ವೆಂಕಟಪ್ಪ ನಾಯಕ ಮೊಟ್ಟ ಮೊದಲ ಬಾರಿಗೆ ಅಂದರೆ 1600 ಇಸವಿಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಸಿರುವ ಬಗ್ಗೆ ಇತಿಹಾಸ ಇದೆ. ಶ್ರೀ ಕುದುರೆಬೀರಪ್ಪ ಹಾಗೂ ಶ್ರೀ ಮುಖ್ಯಪ್ರಾಣ ಹನುಮಂತ ದೇವಸ್ಥಾನವು ಈ ಹಿಂದೆ ಕೆಳದಿ ಸಂಸ್ಥಾನದ ವ್ಯಾಪ್ತಿಗೆ ಬಂದಿರುವುದರಿಂದ ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಇಲ್ಲಿಯೂ ಲಕ್ಷದೀಪೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಜ.18 ರಿಂದ ಜ.22ರವರೆಗೆ ಪ್ರತಿದಿನ ಸಂಜೆ 5 ರಿಂದ ರಾತ್ರಿ 9 ರವರೆಗೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

    ಜ.22ರಂದು ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಸರಿಸುಮಾರು 8000 ಜನರು ಸೇರುವ ನಿರೀಕ್ಷೆ ಇದೆ. ತಾಲೂಕಿನ ಎಲ್ಲ ಸಮುದಾಯದ ಮುಖಂಡರಿಗೆ ಆಮಂತ್ರಣ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

    ದೇವಸ್ಥಾನದ ಆಡಳಿತ ಮಂಡಳಿತ ಅಧ್ಯಕ್ಷ ರಾಮಚಂದ್ರ ನಾಯ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ ನಾಯ್ಕ, ಗೌರವಾಧ್ಯಕ್ಷ ಚಂದ್ರು ನಾಯ್ಕ, ಕಾರ್ಯದರ್ಶಿ ಯಶೋಧರ ನಾಯ್ಕ, ಭಾಸ್ಕರ ನಾಯ್ಕ, ಸುರೇಶ ಹೊಸ್ಟನೆ, ಭಾಸ್ಕರ ಆಚಾರ್ಯ, ಲೋಕೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts