More

    ಲಕ್ಕವಳ್ಳಿ ಕೋಟೆ ಮಾರಿಕಾಂಬೆ ಜಾತ್ರೆ ಸಡಗರ

    ತರೀಕೆರೆ: ಸರ್ವ ಧರ್ಮೀಯರ ಸಹಬಾಳ್ವೆ ಮತ್ತು ಸಾಮರಸ್ಯದ ಸಂಕೇತವಾಗಿರುವ ರಾಜ್ಯದ ಎರಡನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಕವಳ್ಳಿ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಕಳೆದ ಹನ್ನೆರಡು ದಿನಗಳಿಂದ ಭರ್ಜರಿಯಾಗಿ ನಡೆಯುತ್ತಿದ್ದು ಗ್ರಾಮದ ಗಡಿಭಾಗದಲ್ಲಿ ಬುಧವಾರ ಮೂರ್ತಿ ವಿಸರ್ಜಿಸುವ ಮೂಲಕ ಜಾತ್ರೆಗೆ ವೈಭವದ ತೆರೆ ಬೀಳಲಿದೆ.
    ಭದ್ರೆಯ ಅಂಚಿನಲ್ಲಿರುವ ಲಕ್ಕವಳ್ಳಿ ಗ್ರಾಮದಲ್ಲಿ ವಿವಿಧ ಧರ್ಮಗಳ 36 ಕೋಮಿನವರು ನೂರಾರು ವರ್ಷಗಳಿಂದ ನೆಲೆಕಂಡುಕೊಂಡಿದ್ದಾರೆ. ಇಲ್ಲಿನ ಜನರ ಸಹಬಾಳ್ವೆ ಮತ್ತು ಭಾವೈಕ್ಯತೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅದ್ದೂರಿಯಾಗಿ ನಡೆಯುವ ಶ್ರೀ ಕೋಟೆ ಮಾರಿಕಾಂಬಾ ಜಾತ್ರೋತ್ಸವ ಸಾಕ್ಷಿಯಾಗಿದೆ.
    2022ನೇ ಸಾಲಿನವರೆಗೂ ಕರೋನಾ ಕಾಡಿದ ಕಾರಣ ಎರಡು ವರ್ಷ ತಡವಾಗಿ ಜಾತ್ರಾ ಮಹೋತ್ಸವ ನಡೆಸುವಂತಾಗಿದೆ. ಗ್ರಾಮಸ್ಥರು ಇಷ್ಟದೇವತೆ ಶ್ರೀ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
    ಏ.30ರಿಂದಲೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ವಿವಿಧ ಪೂಜಾ ಕಾರ್ಯಗಳು, ಧಾರ್ಮಿಕ ವಿಧಿ ವಿಧಾನಗಳು ಆಯಾ ಕೋಮಿನ ಜನರ ಪದ್ಧತಿಯನುಸಾರ ಪ್ರತಿದಿನ ನಡೆಯುತ್ತಿದೆ. ಸತತ 20 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಲಕ್ಕವಳ್ಳಿಯಷ್ಟೇ ಅಲ್ಲ ಸುತ್ತಮುತ್ತಲ ಗ್ರಾಮಸ್ಥರು, ಭಕ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ಕಾಣಿಕೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ. ಮಾರಿಕಾಂಬೆಗೆ ದೃಷ್ಟಿ ಬೊಟ್ಟಿಡುವುದೇ ಜಾತ್ರಾ ಮಹೋತ್ಸವದ ಕುತೂಹಲಕರ ಘಟ್ಟವಾಗಿದೆ. ಮೇ 14ರ ಸಂಜೆ ನೆರವೇರುವ ದೃಷ್ಟಿ ಬೊಟ್ಟಿಡುವ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಅಸಂಖ್ಯಾತ ಭಕ್ತರು ಕಾದು ಕುಳಿತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts