More

    ತೂಬಗೆರೆ ರಾಜಕಾಲುವೆ ನಿರ್ವಹಣೆ ಕೊರತೆ

    ವಿಜಯವಾಣಿ ಸುದ್ದಿಜಾಲ ತೂಬಗೆರೆ
    ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ರಾಜಕಾಲುವೆ ಬಹಳ ವರ್ಷಗಳಿಂದ ನಿರ್ವಹಣೆ ಕೊರತೆ ಎದುರಿಸುತ್ತಿದೆ. ರಾಜಕಾಲುವೆ ತುಂಬ ಕಸಕಡ್ಡಿ ತುಂಬಿಕೊಂಡಿದ್ದು, ನೀರಿನ ಸರಾಗ ಹರಿವಿಗೆ ತೊಡಕಾಗಿದೆ. ನಿಂತ ಮಲಿನ ನೀರಿನ ಗಬ್ಬು ವಾಸನೆಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ.
    ತೂಬಗೆರೆ ಬಸ್ ನಿಲ್ದಾಣ ಪಕ್ಕದಲ್ಲಿರುವ ರಾಜಕಾಲುವೆ ಸ್ವಚ್ಛತೆ ಬಗ್ಗೆ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾ ಬಂದಿದೆ. ಹಲವು ವರ್ಷದಿಂದ ಕಾಲುವೆಯಲ್ಲಿ ತುಂಬಿರುವ ಕಸ ತೆರವಿಗೆ ಸಿಬ್ಬಂದಿ ಮುಂದಾಗಿಲ್ಲ. ಗಿಡಗಂಟಿ ಬೆಳೆದು ರಾಜಕಾಲುವೆ ಗುರುತು ಸಿಗದಂತೆ ಮುಚ್ಚಿದೆ.
    ರೋಗ ಭೀತಿ: ಬಸ್ ನಿಲ್ದಾಣದ ಪಕ್ಕದಲ್ಲೇ ರಾಜಕಾಲುವೆ ಹಾದುಹೋಗಿದ್ದು, ಕಲುಷಿತ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುವ ಜತೆಗೆ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ರೂಪುಗೊಂಡಿದೆ. ಜತೆಗೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ನಿಲ್ಲಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸೊಳ್ಳೆ, ನೊಣಗಳ ಕಾಟಕ್ಕೆ ಜನ ಬಸವಳಿಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಮುರಿದು ಬೀಳುತ್ತಿರುವ ಕಲ್ಲುಗಳು: ರಾಜಕಾಲುವೆ ಸಾಗಿರುವ ಮಾರ್ಗಮಧ್ಯೆಯಲ್ಲಿ ಅಲ್ಲಲ್ಲಿ ತಡೆಗೋಡೆಯ ಕಲ್ಲುಗಳು ಮುರಿದು ಕಾಲುವೆಗೆ ಬಿದ್ದಿವೆ. ಕೆಲವು ಕಡೆಗಳಲ್ಲಿ ತಡೆಗೋಡೆ ಶಿಥಿಲಗೊಂಡಿದ್ದು ಪೂರ್ತಿ ಗೋಡೆಯೇ ಕುಸಿದು ಬೀಳುವ ಅಪಾಯವಿದೆ. ಆದರೂ ಸಂಬಂಧಪಟ್ಟವರು ಇದರ ದುರಸ್ಥಿಗೆ ಮುಂದಾಗಿಲ್ಲ, ಜೋರಾಗಿ ಮಳೆಬಂದರೆ ರಾಜಕಾಲುವೆ ತಡೆಗೋಡೆ ಕಾಲುವೆಯ ಪಾಲಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts