More

    ಕಾಂಗ್ರೆಸ್​ಗೆ ಕಾರ್ಮಿಕ ಸಂಘಟನೆ ಬೆಂಬಲ

    ಕೊಪ್ಪಳ: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ೆಡರೇಷನ್​ ಸಿಐಟಿಯು ಐಎನ್​ಡಿಐಎ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದು, ಕೊಪ್ಪಳದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ನಡೆಸಲಿದ್ದೇವೆ ಎಂದು ೆರೇಷನ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದರು.

    ಕಾರ್ಮಿಕರ ಕಾಯ್ದೆ, ಸೆಸ್​ ಕಾಯ್ದೆ ರಕ್ಷಣೆ, ಕಾಮಿಕರ ಹಕ್ಕುಗಳಕಲ್ಯಾಣಮಂಡಳಿ ಸೌಲಭ್ಯಗಳ ಉಳಿವು, ಕಾಪೋರ್ರೇಟ್​ ಕಂಪನಿಗಳ ಪರವಾದ ಕಾಯ್ದೆಗಳ ರದ್ಧತಿ ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ ಸಂಟನೆ ಈ ನಿರ್ಧಾರ ಮಾಡಿದೆ. ಕಳೆದ 10 ವರ್ಷದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕ ಜೀವನದ ಮೇಲೆ ವ್ಯವಸ್ಥಿತ ದಾಳಿ ಮಾಡಿದೆ. ನೋಟು ಅಮಾನ್ಯೀಕರಣ, ಜಿಎಸ್​ಟಿ ಜಾರಿ ನೇರ ಪರಿಣಾಮ ನಿರ್ಮಾಣ ವಲಯದ ಕಾರ್ಮಿಕರ ಮೇಲಾಗಿದೆ. ಕೇಂದ್ರ ಕಲ್ಯಾಣ ಮಂಡಳಿ ನಿಧಿ ದುರ್ಬಳಕೆ ಮಾಡಿಕೊಂಡಿದೆ. ಜತೆಗೆ ಚುನಾವಣಾ ಬಾಂಡ್​ ಹೆಸರಿನಲ್ಲಿ ಕಾಪೋರ್ರೇಟ್​ ಕಂಪನಿಗಳಿಂದ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ಇವೆಲ್ಲ ಕಾರಣಗಳಿಗಾಗಿ ಕಾಂಗ್ರೆಸ್​ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಯುದ್ಧ ಪೀಡಿತ ಇಸ್ರೇಲ್​ಗೆ ದೇಶದ ಸಾವಿರಾರು ಕಾರ್ಮಿಕರನ್ನು ಕಳಿಸಿದ್ದು, ಅವರಿಗೆ ಭದ್ರತೆ ಇಲ್ಲ. ಕಾರ್ಮಿಕರ ಜೀವದ ಜತೆಗೆ ಚೆಲ್ಲಾಟ ಆಡುತ್ತಿದ್ದು, ದೇಶದ ಸೌಹಾರ್ದತೆಯನ್ನು ಬಿಜೆಪಿ ಹಾಳು ಮಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್​ ಬೆಂಬಲಿಸಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದು, ಕೊಪ್ಪಳದಲ್ಲೂ ರಾಜಶೇಖರ ಹಿಟ್ನಾಳ ಪರ ಮತ ಯಾಚಿಸಲಿದ್ದೇವೆ ಎಂದರು.

    ಪದಾಧಿಕಾರಿಗಳಾದ ಕಾಸಿಂ ಸರ್ದಾರ, ಹನುಮೇಶ ಭೋವಿ, ಮೆಹಬೂಬ್​ ದಪೇದಾರ, ಇಕ್ಬಾಲ್​ ಪೇಂಟರ್​, ಇಸ್ಮಾಯಿಲ್​ ಇಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts