More

    ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸದಂತೆ ಒತ್ತಾಯಿಸಿ ಕಂಪ್ಲಿಯಲ್ಲಿ ವಿವಿಧ ಸಂಘಟನೆಗಳಿಂದ ತಹಸೀಲ್ದಾರ್ ರೇಣುಕಾಗೆ ಮನವಿ

    ಕಂಪ್ಲಿ: ಕಾರ್ಮಿಕ ಕಾಯ್ದೆಗಳ ಅಮಾನತು ಖಂಡಿಸಿ ತಾಲೂಕು ಕರ್ನಾಟಕ ಶ್ರಮಿಕ ಶಕ್ತಿ ಕೇಂದ್ರ ಸೇರಿ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ತಹಸೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿದರು.

    ಶ್ರಮಿಕ ಶಕ್ತಿ ಕೇಂದ್ರದ ಮುಖಂಡರ ಕರಿಯಪ್ಪ ಗುಡಿಮನಿ ಮಾತನಾಡಿ, ಕಾರ್ಪೋರೇಟ್ ಕಂಪನಿಗಳ ಮೆಚ್ಚಿಸಲು ಸರ್ಕಾರ ಕಾರ್ಮಿಕ ಕಾಯ್ದೆ ಅಮಾನತುಗೊಳಿಸುವ ಷಡ್ಯಂತ್ರ ಮಾಡುತ್ತಿದೆ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಬೃಹತ್ ಬಂಡವಾಳಶಾಹಿಗಳ ಪರವಾಗಿದೆ. ಕಾರ್ಮಿಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕರೊನಾ ಸಂತ್ರಸ್ತ ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಹತ್ತು ಸಾವಿರ ರೂ. ಸಹಾಯಧನ, ಸಮಗ್ರ ಆಹಾರ ಸಾಮಗ್ರಿ ಒದಗಿಸಬೇಕು. 8 ರಿಂದ 12 ಗಂಟೆಗೆ ಕೆಲಸದ ಅವಧಿ ಹೆಚ್ಚಿಸಬಾರದು. ಸರ್ವಜನ ಹಿತರಕ್ಷಣೆಗಾಗಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಜನಶಕ್ತಿ, ಶ್ರಮಿಕ ಶಕ್ತಿ, ಮಹಿಳಾ ಮುನ್ನಡೆ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರಾದ ವಸಂತರಾಜ ಕಹಳೆ, ಇ.ಧನಂಜಯ, ಸಿ.ಯಲ್ಲಮ್ಮ, ಕೆ.ನೀಲಪ್ಪ ಪೇಂಟರ್, ಶಾಂತಪ್ಪ ಪೂಜಾರಿ, ಶ್ರೀಕಾಂತ್, ಸಿ.ಬಸವರಾಜ, ಶಶಿಧರ, ಆರ್.ನಾಗರಾಜ, ಪಿ.ಬಸವರಾಜ, ಸುಂಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts