More

    ಬಂಕ್, ಲಾಡ್ಜ್, ಡಾಬಾಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯ; ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಸೂಚನೆ

    ನಿರ್ಲಕ್ಷ್ಯ ವಹಿಸಿದಲ್ಲಿ ದಂಡ, ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ

    ಕುಷ್ಟಗಿ: ಪೆಟ್ರೋಲ್ ಬಂಕ್, ಲಾಡ್ಜ್ ಹಾಗೂ ಡಾಬಾಗಳ ಒಳ ಹಾಗೂ ಹೊರ ಭಾಗದಲ್ಲಿ ಸುತ್ತಲಿನ ಸನ್ನಿವೇಶಗಳು ಸೆರೆಯಾಗುವಂತೆ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.

    ಪಟ್ಟಣದ ಸಿಪಿಐ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪೆಟ್ರೋಲ್ ಬಂಕ್, ಲಾಡ್ಜ್ ಹಾಗೂ ಡಾಬಾಗಳ ಮಾಲೀಕರ ಸಭೆಯಲ್ಲಿ ಮಾತನಾಡಿದರು. 2018ರ ಸಾರ್ವಜನಿಕ ಸುರಕ್ಷತಾ ಕಾಯ್ದೆಯಂತೆ ಏಕಕಾಲಕ್ಕೆ ನೂರು ಜನ ಸೇರುವ ಅಥವಾ ದಿನದಲ್ಲಿ 500 ಜನ ಬಂದು ಹೋಗುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲೇಬೇಕು. ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದ ಪೆಟ್ರೋಲ್ ಬಂಕ್, ಡಾಬಾಗಳಲ್ಲಿ ಹೆಚ್ಚು ಜನ ಸೇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಬೇಕು. 30ದಿನಗಳ ಸ್ಟೋರೇಜ್ ಹೊಂದಿರುವ ಹಾಗೂ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಬೇಕು. ನೆಪ ಮಾತ್ರಕ್ಕೆ ಅಳವಡಿಸಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗುವುದು ನಂತರದಲ್ಲಿ 25-50 ಸಾವಿರ ದಂಡ ವಿಧಿಸಲಾಗುವುದು. ಆಗಲೂ ನಿರ್ಲಕ್ಷ್ಯ ವಹಿಸಿದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಹೊಟೆಲ್ ಡಾಬಾಗಳಲ್ಲಿ ಸ್ವಚ್ಚತೆ ಹಾಗೂ ಶುಚಿತ್ವ ಕಾಪಾಡಬೇಕು. ಮದ್ಯಪಾನ ಹಾಗೂ ಬೀಡಿ ಸಿಗರೇಟ್ ಸೇವನೆಗೆ ಅವಕಾಶ ನೀಡಬಾರದು. ಸ್ಥಳೀಯ ಪೊಲೀಸರ ಫೋನ್ ನಂಬರ್‌ಗಳ ಫಲಕವನ್ನೂ ಕಡ್ಡಾಯವಾಗಿ ಅಳವಡಿಸಬೇಕು. ಈ ಎಲ್ಲ ನಿಯಮಗಳನ್ನು ಪಾಲಿಸಿ 7ದಿನಗಳಲ್ಲಿ ಪಾಲನಾ ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ಸಿಪಿಐ ಎನ್.ಆರ್.ನಿಂಗಪ್ಪ, ಪಿಎಸ್‌ಐ ತಿಮ್ಮಣ್ಣ ಇದ್ದರು.

    ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ : ಗ್ರಾಪಂ ಚುನಾವಣೆ ಸೂಕ್ಷ್ಮ ಹಾಗೂ ಶಂತಿಯುತ ನಡೆಯಲಿದ್ದು, ವಿವಿಧ ಪ್ರಕರಣಗಗಳ್ಲಿ ಭಾಗಿಯಾಗಿರುವ ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಯತ್ನಿಸಬಾರದು ಎಂದು ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಎಚ್ಚರಿಸಿದರು.

    ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೌಡಿ ಶೀಟರ್‌ಗಳ ಪರೇಡ್ ನಡೆಸಿ ಸೋಮವಾರ ಮಾತನಾಡಿದರು. ಯಾವುದೇ ಜಾತಿ, ಪಕ್ಷ, ಮನೆಯ ಪರ ವಹಿಸಿ ಗಲಾಟೆಯಲ್ಲಿ ಭಾಗವಹಿಸಿದರೆ ರೌಡಿ ಶೀಟ್ ಇನ್ನೂ ಕಠಿಣವಾಗುತ್ತದೆ. ಗಡಿಪಾರು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ ಎಂದು ಸೂಚಿಸಿದರು. ಸಿಪಿಐ ಎನ್.ಆರ್.ನಿಂಗಪ್ಪ ಮಾತನಾಡಿದರು. ಪಿಎಸ್‌ಐ ತಿಮ್ಮಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts