More

    ವಾಣಿಜ್ಯ ಉದ್ದೇಶಕ್ಕೆ ಪುರಸಭೆ ಕಲ್ಯಾಣ ಮಂಟಪ ಬಾಡಿಗೆ: ಕುಷ್ಟಗಿಯಲ್ಲಿ ಪ್ರಗತಿಪರ ಸಂಘಟನೆಗಳ ಆಕ್ರೋಶ

    ಕುಷ್ಟಗಿ: ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆಂದು ನಿರ್ಮಿಸಿರುವ ಕಲ್ಯಾಣ ಮಂಟಪವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡಿರುವ ಪುರಸಭೆ ವಿರುದ್ಧ ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

    ಕೆ.ಶರಣಪ್ಪ ಶಾಸಕರಿದ್ದಾಗ ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿತ್ತು. ಮೇರು ನಟ ಡಾ.ರಾಜಕುಮಾರ್ ನಿಧನ ನಂತರ ಅವರ ಹೆಸರನ್ನೇ ಮಂಟಪಕ್ಕೆ ಇಡಲಾಯಿತು. ನಿರ್ವಹಣೆ ಇಲ್ಲದೆ ಶಿಥಿಲಗೊಂಡು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಡಾ.ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದ ಪುರಸಭೆ, ಕಟ್ಟಡ ದುರಸ್ತಿಗಾಗಿ 2015-16ನೇ ಸಾಲಿನಿಂದ 2019-20ನೇ ಸಾಲಿನವರೆಗಿನ 14ನೇ ಹಣಕಾಸು ಯೋಜನೆಯಡಿ 6.80 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಪ್ರಕ್ರಿಯೆ ಮುಗಿಸಿ ಗುತ್ತಿಗೆದಾರರಿಗೆ ಕಾಮಗಾರಿ ಆದೇಶವನ್ನೂ ನೀಡಿದೆ. ಆದರೆ ಕಾಮಗಾರಿ ಆರಂಭಿಸುವ ಬದಲು ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ಬಾಡಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸದ್ದಿಲ್ಲದೆ ನಡೆದ ತಯಾರಿ: ಕಲ್ಯಾಣ ಮಂಟಪದ ಒಳಗೆ ಬಟ್ಟೆ ವ್ಯಾಪಾರಕ್ಕೆಂದು ಲಕ್ಷಾಂತರ ರೂ. ಖರ್ಚು ಮಾಡಿ ಪೀಠೋಪಕರಣ ಅಳವಡಿಸುವ ಕಾರ್ಯ ಸದ್ದಿಲ್ಲದೆ ಸಾಗಿದ್ದು, ಭಾಗಶಃ ಕೆಲಸ ಪೂರ್ಣಗೊಂಡಿದೆ. ಇನ್ನೇನು ಅಂಗಡಿ ಆರಂಭವಾಗುವಷ್ಟರಲ್ಲಿ ಪಟ್ಟಣದ ಡಾ.ರಾಜ್ ಅಭಿಮಾನಿ ಸಂಘ, ಹೈ.ಕ.ಯುವ ಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಟ್ಟಡ ಬಾಡಿಗೆ ನೀಡುತ್ತಿರುವುದನ್ನು ವಿರೋಧಿಸಿ ಶನಿವಾರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಬಟ್ಟೆ ವ್ಯಾಪಾರಕ್ಕೆ ಕಲ್ಯಾಣ ಮಂಟಪ ಬಾಡಿಗೆ ನೀಡಿರುವುದು ಗಮನಕ್ಕಿಲ್ಲ ಎಂದು ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹೇಳಿದ್ದು, ತೆರವುಗೊಳಿಸಲು ಕಾಲಾವಕಾಶ ಕೋರಿದ್ದಾರೆ.

    ವಾಣಿಜ್ಯ ಉದ್ದೇಶಕ್ಕೆ ಪುರಸಭೆ ಕಲ್ಯಾಣ ಮಂಟಪ ಬಾಡಿಗೆ: ಕುಷ್ಟಗಿಯಲ್ಲಿ ಪ್ರಗತಿಪರ ಸಂಘಟನೆಗಳ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts