More

    ವಿಶ್ವಕರ್ಮ ಸಮುದಾಯ ಆರ್ಥಿಕ ಪ್ರಗತಿ ಹೊಂದಲಿ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಸಲಹೆ

    ಕುಷ್ಟಗಿ: ವಿಶ್ವಕರ್ಮರು ದೇವರ ಪ್ರತಿರೂಪ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು. ಪಟ್ಟಣದ ಕಾಳಿಕಾ ದೇವಿ ದೇವಸ್ಥಾನ ಆವರಣದಲ್ಲಿ ತಾಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಭಗವಾನ್ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು. ರೈತರ ಒಡನಾಡಿ ಹಾಗೂ ಎಲ್ಲ ಸಮುದಾಯಗಳ ಜತೆ ಸೌಹಾರ್ದತೆಯಿಂದ ಬದುಕುವ ವಿಶ್ವಕರ್ಮರು, ಸುಶಿಕ್ಷಕಿತರಾಗಿ ಆರ್ಥಿಕ ಪ್ರಗತಿ ಹೊಂದಬೇಕಿದೆ ಎಂದರು.

    ಸಮುದಾಯದ ಜಿಲ್ಲಾ ಅಧ್ಯಕ್ಷ ಈಶಪ್ಪ ಬಡಿಗೇರ ಮಾತನಾಡಿ, ತಾಲೂಕಿನಲ್ಲಿ 10 ಸಾವಿರ ಜನಸಂಖ್ಯೆ ಹೊಂದಿರುವ ಸಮುದಾಯ ಸಂಘಟನೆ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕಾಗಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಪ್ರಮುಖ ಜನಪ್ರತಿನಿಧಿಗಳು ಪಾಲ್ಗೊಂಡಿಲ್ಲ. ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ನಾಯಕರಿಗೆ ತಕ್ಕ ಪಠ ಕಲಿಸಬೇಕು ಎಂದರು.

    ತಾಲೂಕು ಅಧ್ಯಕ್ಷ ಗುರಪ್ಪ ಬಡಿಗೇರ ಮಾತನಾಡಿ, ಸಮುದಾಯ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಪ್ರತಿಯೊಬ್ಬರೂ ಸಂಘಟಿತರಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕಿದೆ ಎಂದರು.

    ಕಾಂಗ್ರೆಸ್ ಯುವಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಪುರ ಮಾತನಾಡಿದರು. ಶಿಕ್ಷಕ ನಟರಾಜ ಸೋನಾರ ಉಪನ್ಯಾಸ ನೀಡಿದರು. ಲೇಬಗೇರಿಯ ನಾಗಮೂರ್ತೇಂದ್ರ ಸ್ವಾಮೀಜಿ, ದಿವಾಕರ ಸ್ವಾಮೀಜಿ, ಆನೆಗೊಂದಿಯ ಬ್ರಹ್ಮೇಂದ್ರ ಸ್ವಾಮೀಜಿ, ತೀರ್ಥೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮುದಾಯದ ಗೌರವ ಅಧ್ಯಕ್ಷ ಮಾನಪ್ಪ ಕಮ್ಮಾರ್, ಪ್ರ.ಕಾರ್ಯದರ್ಶಿ ಶರಣಪ್ಪ ಬುಡಕುಂಟಿ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಯಲಬುರ್ಗಾ ತಾಲೂಕು ಅಧ್ಯಕ್ಷ ಶ್ರೀಶೈಲ ಬಡಿಗೇರ, ಪುರಸಭೆ ಸದಸ್ಯೆ ಇಮಾಮ್ ಬಿ. ಕಲಬುರಗಿ, ಪ್ರಮುಖರಾದ ಕೆ.ಬಿ.ಬಡಿಗೇರ, ವೀರಣ್ಣ ಪತ್ತಾರ್, ಉಮ್ಮಣ್ಣ ಪತ್ತಾರ್, ಪ್ರಕಾಶ ಪತ್ತಾರ್, ರಾಮಣ್ಣ ಬಡಿಗೇರ, ವಾಸಪ್ಪ ಪತ್ತಾರ್, ರವೀಂದ್ರ ಪತ್ತಾರ್ ಇತರರಿದ್ದರು.

    ಕಾರ್ಯಕ್ರಮಕ್ಕೂ ಮುನ್ನ ತಹಸಿಲ್ ಕಚೇರಿಯಿಂದ ಆರಂಭಗೊಂಡ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಗ್ರೇಡ್-2 ತಹಸೀಲ್ದಾರ್ ಮುರುಳೀಧರ್ ಚಾಲನೆ ನೀಡಿದರು. ಸಮುದಾಯದ ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts