More

    ಟೆಂಗುಂಟಿ ಗ್ರಾಮದ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ

    ಕುಷ್ಟಗಿ: ತಾಲೂಕಿನ ಟೆಂಗುಂಟಿ ಗ್ರಾಮದ ಸಹಿಪ್ರಾಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಿಜ್ಞಾನ ವಸ್ತುಪ್ರದರ್ಶನ, ನಲಿಕಲಿ ಮೇಳ ನಡೆದವು.

    ನಿರುಪಯುಕ್ತ ಎಂದು ಬಿಸಾಡಿದ ಪ್ಲಾಸ್ಟಿಕ್ ಡಬ್ಬಿ, ಸೈಕಲ್ ಚಕ್ರ, ಬಲ್ಬ್ ಇತ್ಯಾದಿಗಳಿಂದ ನೀರಿನಲ್ಲಿ ಇಂಗಾಲದ ಪ್ರಮಾಣ ಕಂಡು ಹಿಡಿಯುವ, ಹೃದಯ ಬಡಿತ ತೋರಿಸುವ, ಸೂರ್ಯನ ಸುತ್ತ ತಿರುಗುವ ಗ್ರಹಗಳು ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಜನ ಮನ ಸೆಳೆಯಿತು.

    ನಲಿ ಕಲಿ ಮೇಳದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಪ್ರತಿಭೆ ಅನಾವರಣಗೊಂಡಿತು. ಶಾಖದ ವರ್ಗಾವಣೆ, ತೇಲುವ-ಮುಳುಗುವ ವಸ್ತುಗಳು, ಮಾಯದ ಮಳೆ, ಕೆಳಗೆ ಬೀಳದ ನೀರು ಹೀಗೆ ನಲಿ ಕಲಿ ಪಠ್ಯದಲ್ಲಿನ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಒತ್ತಕ್ಷರಗಳ ಪರಿಕಲ್ಪನೆಯನ್ನು ಬೆಂಕಿ ಪೊಟ್ಟಣದ ಮೂಲಕ ವಿವರಿಸಿದ್ದು ವಿಶೇಷವಾಗಿತ್ತು.

    ಎಸ್‌ಡಿಎಂಸಿ ಯಾಕ್ರಿ ಬೇಕು?: ಶಾಲೆಯಲ್ಲಿ ರಾಜಕೀಯ ಪ್ರವೇಶಿಸುವುದು ಬೇಡ ಎಂಬ ಕಾರಣಕ್ಕೆ ಎಸ್‌ಡಿಎಂಸಿ ರಚಿಸುವುದು ಬೇಡ ಎಂಬ ತೀರ್ಮಾನಕ್ಕೆ ನಡೆಯುತ್ತಿವೆ ಎನ್ನುತ್ತಾರೆ ಅಲ್ಲಿನ ಶಿಕ್ಷಕರು. ಶಾಲೆಗೆ ಅಗತ್ಯ ಸಹಕಾರ ನೀಡುವ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಕಾರ್ಯ ಮಾಡುತ್ತೇವೆ ಎನ್ನುವ ಗ್ರಾಮಸ್ಥರು, ಸಸಿಗಳು ಸೇರಿ ಶಾಲೆಗೆ ವಿವಿಧ ವಸ್ತುಗಳ ದೇಣಿಗೆ ನೀಡುತ್ತಾರೆ. ವಾಟ್ಸ್‌ಆ್ಯಪ್ ಗ್ರುಪ್ ರಚಿಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.

    ಶಾಲೆಯಲ್ಲಿ 1-7ನೇ ತರಗತಿ ವರೆಗಿನ 255 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ವಾತಾವರಣ ಮಕ್ಕಳನ್ನು ಆಕರ್ಷಿಸುತ್ತಿದೆ. ಗ್ರಾಮಸ್ಥರೂ ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ. ವಿದ್ಯುತ್ ಸಂಪರ್ಕ, ಡೆಸ್ಕ್, ಕಂಪ್ಯೂಟರ್‌ಗಳ ವ್ಯವಸ್ಥೆಯಾಗಬೇಕಿದೆ.
    -ಶರಣಮ್ಮ ಮಾದರ್, ಮುಖ್ಯ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts