More

    ಟಕ್ಕಳಕಿ ಗ್ರಾಮದ ಅಂಗನವಾಡಿ ಒಳಗೆ ಕಟ್ಟಿಗೆಗಳ ಸಂಗ್ರಹ, ಹೊರಗೆ ಕೊಟ್ಟಿಗೆ: ದುರಸ್ತಿಗೆ ಮುಂದಾಗದ ಅಧಿಕಾರಿಗಳು

    ಕುಷ್ಟಗಿ: ಟಕ್ಕಳಕಿ ಗ್ರಾಮದಲ್ಲಿ ಸಂಪೂರ್ಣ ಶಿಥಿಲಗೊಂಡಿರುವ ಅಂಗನವಾಡಿಗೆ ಮೂರು ವರ್ಷವಾದರೂ ಮುಕ್ತಿ ಸಿಕ್ಕಿಲ್ಲ. ಆದರೆ, ನಿರುಪಯುಕ್ತವಾಗಿದೆಂದು ಅದರಲ್ಲಿ ಕಟ್ಟಿಗೆ ಸಂಗ್ರಹ ಹಾಗೂ ದನಕರು ಕಟ್ಟಿಹಾಕಲು ಬಳಸಲಾಗುತ್ತಿದೆ.

    ಗ್ರಾಮದ ಒಂದನೇ ಅಂಗನವಾಡಿ ಕಟ್ಟಡದ ಛಾವಣಿ ಕಾಂಕ್ರಿಟ್ ಪದರು ಕಳಚಿ ಬೀಳುತ್ತಿದೆ ಎಂಬ ಕಾರಣಕ್ಕೆ ಕೇಂದ್ರವನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ಕಟ್ಟಡ ದುರಸ್ತಿ ಬದಲಿಗೆ ನೆಲಸಮಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ತೀರ್ಮಾನ ಕೈಗೊಂಡು ಮೂರು ವರ್ಷ ಗತಿಸಿದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇತ್ತ ದುರಸ್ತಿಗೂ ಮುಂದಾಗಿಲ್ಲ. ಹೀಗಾಗಿ ಹಳೇ ಕಟ್ಟಡದಲ್ಲಿ ದ್ಯಾಮಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆಂದು ಭಕ್ತರು ನೀಡಿದ ಕಟ್ಟಿಗೆಗಳನ್ನು ಸಂಗ್ರಹಿಸಿಡಲಾಗಿದೆ. ಹೊರಗಡೆ ದನಕರುಗಳನ್ನು ಕಟ್ಟಲಾಗುತ್ತಿದೆ.

    ಟಕ್ಕಳಕಿ ಗ್ರಾಮದ ಅಂಗನವಾಡಿ 1ನೇ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಈಗಿರುವ ಕಟ್ಟಡ ನೆಲಸಮಗೊಳಿಸುವ ವಿಚಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಗೊತ್ತು. ಕಟ್ಟಡ ಕೆಡವಿದರೆ ಹೊಸ ಕಟ್ಟಡ ನಿರ್ಮಿಸುವ ಕಾಮಗಾರಿ ಆರಂಭಿಸಲಾಗುವುದು.
    | ಆನಂದರಾವ್ ಪಿಡಿಒ, ಬಿಜಕಲ್ ಗ್ರಾಪಂ

    ಕಟ್ಟಡ ಶಿಥಿಲಗೊಂಡ ಕಾರಣ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಕಟ್ಟಡ ನೆಲಸಮಗೊಳಿಸುವ ಸಂಬಂಧ ಜಿಪಂ ಉಪ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅನುಮತಿ ನೀಡಿದರೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು.
    | ಅನ್ನಪೂರ್ಣ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts